ನಾನು ಪಾಕಿಸ್ತಾನದವನಾದರೆ ಒಳ್ಳೆಯದಿತ್ತೆಂದು ಅನಿಸಿತ್ತು: ಸೋನು ನಿಗಮ್

Update: 2018-12-18 17:42 GMT

ಹೊಸದಿಲ್ಲಿ, ಡಿ.18: ಬಾಲಿವುಡ್ ನಲ್ಲಿ ಪಾಕಿಸ್ತಾನಿ ಗಾಯಕರಿಗೆ ಹೆಚ್ಚು ಅವಕಾಶಗಳು ಸಿಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಸಿದ್ಧ ಗಾಯಕ ಸೋನು ನಿಗಮ್, “ನಾನು ಪಾಕಿಸ್ತಾನದವನಾದರೆ ಒಳ್ಳೆಯದಿತ್ತು ಎಂದು ನನಗೆ ಕೆಲವೊಮ್ಮೆ ಅನಿಸಿತ್ತು. ಏಕೆಂದರೆ ಆಗ ನನಗೆ ಭಾರತದಿಂದ ಅವಕಾಶಗಳಾದರೂ ಲಭಿಸಬಹುದಿತ್ತು” ಎಂದು ಹೇಳಿದ್ದಾರೆ.

ಅಜೆಂಡಾ ಆಜ್ ತಕ್ 2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದಿನ ದಿನಗಳಲ್ಲಿ ಶೋಗಳಿಗಾಗಿ ಗಾಯಕರೇ ಮ್ಯೂಸಿಕ್ ಕಂಪೆನಿಗಳಿಗೆ ಹಣ ಪಾವತಿಸಬೇಕು. ನಾವು ಹಣ ನೀಡದಿದ್ದರೆ ಬೇರೆ ಗಾಯಕರು ಹಾಡಿದ ಹಾಡುಗಳನ್ನು ಅವರು ಪ್ಲೇ ಮಾಡುತ್ತಾರೆ. ನಂತರ ಅವರಿಂದ ಹಣ ಪಡೆದುಕೊಳ್ಳುತ್ತಾರೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News