ರೊಹಿಂಗ್ಯಾರಿಂದ ಹಿಂದೂಗಳ ಭಕ್ಷಣೆ: ಭಯಾನಕ ವರದಿಯ ಹಿಂದಿನ ವಾಸ್ತವ ಇಲ್ಲಿದೆ

Update: 2018-12-20 12:03 GMT

"ಭಯಾನಕ ಸುದ್ದಿ- ರೋಹಿಂಗ್ಯ ಜನ ಹಿಂದೂಗಳನ್ನು ಕೊಂದು ಅವರ ಮಾಂಸ ಭಕ್ಷಿಸುತ್ತಿದ್ದಾರೆ; ಮೇವಾಟ್‍ನ ಒಂದು ಪ್ರಕರಣ; ಈ ಸುದ್ದಿ ನಿಮ್ಮ ನರ-ನಾಡಿಗಳಲ್ಲಿ ನಡುಕ ಹುಟ್ಟಿಸುವಂಥದ್ದು" ಎಂಬ ಸುದ್ದಿ ಸುಳ್ಳು ಸುದ್ದಿಗಳ ವೆಬ್‍ಸೈಟ್ ದೈನಿಕ್ ಭಾರತ್‍ನಲ್ಲಿ ಡಿಸೆಂಬರ್ 18ರಂದು ಪ್ರಕಟವಾಯಿತು. ಈ ಲೇಖನದ ಜತೆಗೆ ಜನರ ಅಂಗಚ್ಧೇನದ ಮಾಡುವುದನ್ನು ಬಿಂಬಿಸುವ ಫೋಟೊ ಕೂಡಾ ಪ್ರಕಟವಾಗಿತ್ತು.

'ದೈನಿಕ್ ಭಾರತ್' ಲೇಖನದಲ್ಲಿ ಒಬ್ಬ ವ್ಯಕ್ತಿ ಶೇರ್ ಮಾಡಿದ ಫೇಸ್‍ಬುಕ್ ಪೋಸ್ಟ್ ಕೂಡಾ ಇತ್ತು. ಆಜ್ ತಕ್ ಗುರುಗಾಂವ್ ಪತ್ರಿಕೆಯ ತುಣುಕನ್ನು ಆ ವ್ಯಕ್ತಿ ಶೇರ್ ಮಾಡಿದ್ದ. ಈ ಪತ್ರಿಕಾ ತುಣುಕಿನಲ್ಲಿ, ಹರ್ಯಾಣದ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಮೇವಾಟ್‍ನಲ್ಲಿ ರೋಹಿಂಗ್ಯ ನಿರಾಶ್ರಿತರು, "ಹಿಂದೂ ಯುವಕನೊಬ್ಬನ ಮಾಂಸ ಭಕ್ಷಿಸುತ್ತಿದ್ದಾರೆ" ಎಂದು ಹೇಳಲಾಗಿತ್ತು.

'ಆಲ್ಟ್ ನ್ಯೂಸ್' ಈ ವರದಿಯ ಆನ್‍ಲೈನ್ ಅವತರಣಿಕೆಯನ್ನು ಪತ್ತೆ ಮಾಡಿತು. "ಹಿಂದುವೋಂ ಕಾ ಮಾಂಸ್ ಖಾನೇ ವಾಲೋಂ ಕೋ ಮಿಲಿ ಮೇವಟ್ ಮೇ ಪನಾಹ್" (ಮೇವಾಟ್‍ನಲ್ಲಿ ಹಿಂದೂಗಳ ಮಾಂಸ ಭಕ್ಷಣೆ ಮಾಡಿದ ವ್ಯಕ್ತಿ ನಿರಾಶ್ರಿತ ಎಂದು ಪತ್ತೆಯಾಗಿದೆ) ಎಂಬ ಶೀರ್ಷಿಕೆಯಡಿ ಈ ಲೇಖನ ಪ್ರಕಟವಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆಜ್ ತಕ್ ಗುರುಗಾಂವ್ ಪತ್ರಿಕೆ ಇಂಡಿಯಾ ಟುಡೇಯ ಆಜ್ ತಕ್ ಸಮೂಹದ ಸಂಸ್ಥೆಯಲ್ಲ ಎನ್ನುವುದು.

ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಉಮ್ರಾವೊ ಇಂಥದ್ದೇ ಪ್ರತಿಪಾದನೆಯ ಟ್ವೀಟ್ ಮಾಡಿ, ಮೇವಾಟ್ ಪಟ್ಟಣವನ್ನು "ಹರ್ಯಾಣದ ಮಿನಿ ಪಾಕಿಸ್ತಾನ" ಎಂದು ಕರೆದರು. ಉಮ್ರಾವೊ ಹಲವು ಬಾರಿ ಇಂಥ ಸುಳ್ಳು ಸುದ್ದಿಗಳನ್ನು ಹರಡಿ ಸಿಕ್ಕಿಹಾಕಿಕೊಂಡಿದ್ದರು. ಇಂಥ ಸುಳ್ಳು ಸುದ್ದಿಗಳ ನಿದರ್ಶನಗಳು ಇವೆ.

ವಾಸ್ತವ ಚಿತ್ರ

ಗೂಗಲ್‍ನ ರಿವರ್ಸ್ ಇಮೇಜ್ ಸರ್ಚ್ ಬಳಸಿ ಪರಿಶೀಲಿಸಿದಾಗ, 2009ರ ಅಕ್ಟೋಬರ್‍ನಲ್ಲಿ ಬ್ಲಾಗ್ ಪೋಸ್ಟ್ ಬರಹದಲ್ಲಿ ಈ ಚಿತ್ರ ಮೊಟ್ಟಮೊದಲ ಬಾರಿಗೆ ಇಂಟರ್‍ನೆಟ್‍ನಲ್ಲಿ ಪ್ರಸಾರವಾದ ನಿದರ್ಶನ ಬೆಳಕಿಗೆ ಬಂತು. ಈ ಬ್ಲಾಗ್ ಬರಹದ ಪ್ರಕಾರ, ಈ ಚಿತ್ರವು ಟಿಬೇಟಿಯನ್ ಜನರ ಅಂತ್ಯಸಂಸ್ಕಾರದ ವಿಧಿವಿಧಾನಗಳ ಪ್ರಾತಿನಿಧಿಕ ಚಿತ್ರ. ಇವರು ತಮ್ಮ ದೇಹವನ್ನು ವನ್ಯ ಪಕ್ಷಿಗಳಿಗೆ ದಾನ ಮಾಡುವ ನಂಬಿಕೆ ಹೊಂದಿದ್ದಾರೆ.

'ಆಲ್ಟ್ ನ್ಯೂಸ್' ಪತ್ತೆ ಮಾಡಿದಂತೆ, ಇದೇ ಚಿತ್ರವನ್ನು ಫೇಸ್‍ಬುಕ್ ಪೇಜ್ ಪ್ರಮಹಾ ಪೈವಾನ್‍ನಲ್ಲಿ 2014ರ ಆಗಸ್ಟ್ 14ರಂದು ಸಾಂದರ್ಭಿಕ ವರ್ಣನೆಯೊಂದಿಗೆ ಬಳಸಲಾಗಿದೆ. ಮತ್ತೊಂದು @damnitbennnnnn_ ಟ್ವಿಟ್ಟರ್ ಹ್ಯಾಂಡಲ್ ಕೂಡಾ ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದು, "ಇದು ಟಿಬೇಟಿಯನ್ ಜನರ ಆಕಾಶ ಸಂಸ್ಕಾರ" ಎಂದು ಹೇಳಿದೆ.

ಟಿಬೇಟಿಯನ್ ಜನರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ತೋರಿಸುವ ಹಲವು ಯು ಟ್ಯೂಬ್ ವಿಡಿಯೊಗಳಿದ್ದು, ಇವುಗಳಲ್ಲಿ ಕಂಡುಬರುವಂತೆ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ, ವನ್ಯ ಪಕ್ಷಿಗಳ ಸೇವನೆಗೆ ಅನುವಾಗುವಂತೆ ಮಾಡಲಾಗುತ್ತದೆ.

1.16 ನಿಮಿಷಗಳ ಈ ವಿಡಿಯೊದಲ್ಲಿ, ರಣಹದ್ದುಗಳು ಮೃತ ದೇಹವನ್ನು ಕುಕ್ಕಿ ತಿನ್ನುತ್ತಿರುವ ಚಿತ್ರಣವಿದೆ. ಕೆಳಗಿನ ಕೊಲ್ಯಾಜ್‍ನಲ್ಲಿ, ಎಡಬದಿ ಇರುವ ಎರಡು ಚಿತ್ರಗಳು ವೈರಲ್ ಚಿತ್ರಗಳ ಭಾಗಗಳು. ಬಲಬದಿ ಇರುವ ಚಿತ್ರ ವಿಡಿಯೊದ ತುಣುಕಿನಿಂದ ಪಡೆದದ್ದು. ಅಂತ್ಯಸಂಸ್ಕಾರ ವಿಧಿವಿಧಾನದಲ್ಲಿ ಹದ್ದುಗಳ ಇರುವಿಕೆಯನ್ನು ಬಿಂಬಿಸುವ ಸಲುವಾಗಿ ಇವುಗಳನ್ನು ಅಕ್ಕಪಕ್ಕದಲ್ಲಿ ನೀಡಲಾಗಿದೆ. ಈ ವೈರಲ್ ಚಿತ್ರಗಳು ಟಿಬೇಟಿಯನ್ ಅಂತ್ಯಸಂಸ್ಕಾರದ ವಿಧಿವಿಧಾನದ ಚಿತ್ರಗಳು ಹಾಗೂ "ರೋಹಿಂಗ್ಯ ಜನ ಹಿಂದೂಗಳನ್ನು ಸೇವಿಸುವ" ಚಿತ್ರವಲ್ಲ ಎನ್ನುವ ವಾದಕ್ಕೆ ಇದು ಹೋಲಿಕೆಯಾಗುತ್ತದೆ.

ಟಿಬೇಟಿಯನ್ನರ ಆಕಾಶ ಸಂಸ್ಕಾರ ಎನ್ನುವುದು ಸಾಂಪ್ರದಾಯಿಕ ಅಂತ್ಯಸಂಸ್ಕಾರ ವಿಧಾನವಾಗಿದ್ದು, ಟಿಬೇಟಿಯನ್ ಬೌದ್ಧರಲ್ಲಿ ಮಾಂಸವನ್ನು ಹೊರತೆಗೆಯುವ ಪ್ರಕ್ರಿಯೆಯಾಗಿದೆ. ಈ ಸಂಪ್ರದಾಯದ ಪ್ರಕಾರ, ಮಾನವ ಮೃತದೇಹವನ್ನು ಪರ್ವತಕ್ಕೆ ಒಯ್ದು ಕ್ಷೀಣ ಪಕ್ಷಿಗಳು ಸೇವಿಸಲು ಅನುವು ಮಾಡಿಕೊಡಲಾಗುತ್ತದೆ. ಆಸ್ಟ್ರೇಲಿಯನ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ 2017ರಲ್ಲಿ ಪ್ರಕಟಿಸಿದ ಒಂದು ಲೇಖನದಲ್ಲಿ ಹೇಳಿರುವಂತೆ, "ಟಿಬೇಟಿಯನ್ನರು ಇದನ್ನು ವಿಶ್ವಕ್ಕೆ ಕೊನೆಯ ಕೊಡುಗೆ ಎಂದು ಪರಿಗಣಿಸುತ್ತಾರೆ. ಇದು ಭೂಮಿಯಲ್ಲಿ ನಮ್ಮ ಜೀವನ ನಶ್ವರ ಹಾಗೂ ಯಾವ ಮಹತ್ವವೂ ಇಲ್ಲದ್ದು ಎನ್ನುವುದನ್ನು ತೋರಿಸುವ ಪ್ರತೀಕ"

ಆಜ್‍ತಕ್ ಗುರುಗಾಂವ್, ಲೇಖನಕ್ಕೆ ಸಂಬಂಧವೇ ಇಲ್ಲದ ಟಿಬೆಟಿಯನ್ ಅಂತ್ಯಸಂಸ್ಕಾರದ ವಿಧಿವಿಧಾನದ ಚಿತ್ರವನ್ನು, ರೋಹಿಂಗ್ಯರು ಹಿಂದೂಗಳ ಮಾಂಸ ಭಕ್ಷಿಸುತ್ತಿದ್ದಾರೆ ಎನ್ನುವ ಅರ್ಥ ಬರುವಂತೆ ಪ್ರಕಟಿಸಿದೆ. ಈ ವರ್ಷದ ಆರಂಭದಲ್ಲಿ ಕೂಡಾ ಒಂದು ನಕಲಿ ವಿಡಿಯೊವನ್ನು ಫೇಸ್‍ಬುಕ್ ಹಾಗೂ ವಾಟ್ಸ್‍ಆ್ಯಪ್‍ನಲ್ಲಿ ಶೇರ್ ಮಾಡಿ, ರೋಹಿಂಗ್ಯ ಮುಸ್ಲಿಮರು ಹಿಂದೂಗಳನ್ನು ಹತ್ಯೆ ಮಾಡಿ ಭಕ್ಷಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.

ಕೃಪೆ : altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News