ಅಮೃತಸರ: ರೈಲ್ವೆ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ
Update: 2018-12-23 12:55 IST
ಅಮೃತಸರ, ಡಿ.23: ಅಮೃತಸರದ ರೈಲ್ವೆ ಸ್ಟೇಶನ್‌ನ ಸ್ವಚ್ಛತಾ ಸಿಬ್ಬಂದಿಯ ಸದಸ್ಯರೊಬ್ಬರು ಶನಿವಾರ ಹೌರಾ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಒಳಗೆ ಪ್ರವೇಶಿಸಿದಾಗ ಅಚ್ಚರಿ ಎದುರಾಗಿತ್ತು. ಶೌಚಾಲಯದಲ್ಲಿ ನವಜಾತ ಗಂಡುಮಗುವೊಂದು ಬಟ್ಟೆಯಿಂದ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ರೈಲಿನ ಎಸಿ ಬೋಗಿಯ ಶೌಚಾಲಯದಲ್ಲಿ ಮಗು ಪತ್ತೆಯಾಗಿದ್ದು, ದಿನದ ಹಿಂದೆ ಹುಟ್ಟಿರುವ ಶಿಶುವಾಗಿತ್ತು. ಇದೊಂದು ಹೀನ ಕೃತ್ಯವಾಗಿರುವ ಸಾಧ್ಯತೆಯಿದೆ.
ಮಗು ಜೀವಂತವಾಗಿರುವುದನ್ನು ನೋಡಿ ಅಚ್ಚರಿಪಟ್ಟ ಸ್ವಚ್ಛತಾ ಕಾರ್ಮಿಕರು ಅದನ್ನು ಅಮೃತಸರದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ‘‘ನವಜಾತ ಶಿಶುವನ್ನು ನಾಲ್ಕು ಗಂಟೆಗೂ ಅಧಿಕ ಸಮಯ ಶೌಚಾಲಯದಲ್ಲಿ ಕಳೆದಿದ್ದು, ವಿಪರೀತ ಚಳಿಯನ್ನು ಸಹಿಸಿಕೊಂಡಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.