5 ವರ್ಷಗಳಲ್ಲಿ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ 49 ವಿದ್ಯಾರ್ಥಿಗಳ ಆತ್ಮಹತ್ಯೆ

Update: 2018-12-24 09:27 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ.24: ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡುವ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ 49 ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರ್.ಟಿ.ಐ. ವಿವರಗಳಿಂದ ತಿಳಿದು ಬಂದಿದೆ.

ಈ ಆತ್ಮಹತ್ಯೆಗಳು 2013-2017ರ ಅವಧಿಯಲ್ಲಿ ಸಂಭವಿಸಿದ್ದು ಆತ್ಮಹತೈಗೈದ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿ ದಲಿತ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಾಗಿದ್ದರು ಹಾಗೂ ಹೆಚ್ಚಿನವರು ಹುಡುಗರಾಗಿದ್ದರು.

ಏಳು ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ಇತರ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಎರಡು ತಿಂಗಳ ಬೇಸಿಗೆ ರಜಾ ಜುಲೈಯಲ್ಲಿ ಅಂತ್ಯಗೊಂಡ ನಂತರದ ಮೂರು ತಿಂಗಳಲ್ಲಿ ಹಾಗೂ ಪರೀಕ್ಷಾ ಸಮಯವಾದ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಹೆಚ್ಚಿನ ಆತ್ಮಹತ್ಯೆಗಳು ಸಂಭವಿಸಿವೆ.

ಕಳೆದ ಆರು ವರ್ಷಗಳಲ್ಲಿ ಈ ಶಾಲೆಗಳು ಹತ್ತನೇ ತರಗತಿಯಲ್ಲಿ ಶೇ.99 ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಶೇ.95ಕ್ಕಿಂತಲೂ ಅಧಿಕ ಫಲಿತಾಂಶ ದಾಖಲಿಸಿವೆ. ಸದ್ಯ ದೇಶದಲ್ಲಿ 635 ಜವಾಹರ್ ನವೋದಯ ವಿದ್ಯಾಲಯಗಳಿದ್ದು ಇಲ್ಲಿ 28 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News