×
Ad

ಸಿಪಿಎಂ ನಾಯಕ ನಿರುಪಮ್ ಸೇನ್ ನಿಧನ

Update: 2018-12-24 21:30 IST

ಕೋಲ್ಕತ್ತಾ, ಡಿ. 24: ಸಿಪಿಎಂನ ಹಿರಿಯ ನಾಯಕ ನಿರುಪಮ ಸೇನ್ ದೀರ್ಘ ಕಾಲದ ಅಸೌಖ್ಯದ ಬಳಿಕ ಇಲ್ಲಿನ ಸಿಟಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಪಶ್ಚಿಮಬಂಗಾಳದ ಮಾಜಿ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾಗಿದ್ದ ನಿರುಪಮ್ ಸೇನ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಿರುಪಮ್ ಸೇನ್ ಹೃದಯಾಘಾತದಿಂದ ಮುಂಜಾನೆ 5.10ಕ್ಕೆ ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಡಿಸೆಂಬರ್ ಆರಂಭದ ವಾರದಲ್ಲಿ ಆರೋಗ್ಯ ಸ್ಥಿತಿ ಕುಸಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಜೀವರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತು.

ಸೇನ್ ಅವರು ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು. 2013ರಲ್ಲಿ ಅವರು ಸೆರೆಬ್ರೆಲ್ ಆಘಾತಕ್ಕೆ ಒಳಗಾಗಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News