ಸ್ವಾಯತ್ತತೆ ರಕ್ಷಿಸಲು ನೂತನ ಆರ್‌ಬಿಐ ಗವರ್ನರ್ ‘ಧರ್ಮ’ ಅನುಸರಿಸಬೇಕು: ಸಿ. ರಂಗರಾಜನ್

Update: 2018-12-24 16:03 GMT

ಮುಂಬೈ, ಡಿ. 24: ಆರ್‌ಬಿಐ ಗವರ್ನರ್ ಸ್ಥಾನಕ್ಕೆ ನಿಯೋಜಿತರಾಗು ವವರಲ್ಲಿ ಶಕ್ತಿಕಾಂತ್ ದಾಸ್ ಮೊದಲ ಅಧಿಕಾರಿ ಅಲ್ಲ ಹಾಗೂ ಅವರು ತನ್ನ ಪೂರ್ವಾಧಿಕಾರಿಯಂತೆ ಆರ್‌ಬಿಐ ಸ್ವಾಯತ್ತತೆ ರಕ್ಷಿಸಲು ‘ಧರ್ಮ’ ಪಾಲಿಸಬೇಕು ಎಂದು ಆರ್‌ಬಿಐಯ ಮಾಜಿ ಗವರ್ನರ್ ಸಿ. ರಂಗರಾಜನ್ ಸೋಮವಾರ ಹೇಳಿದ್ದಾರೆ.

ಎಲ್ಲ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದಾಸ್ ಸರಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಎಂದು ರಂಗರಾಜನ್ ಹೇಳಿದ್ದಾರೆ.

‘‘ದಿಲ್ಲಿಯ ಹಲವು ಜನರು (ಅಧಿಕಾರಿಗಳು) ಆರ್‌ಬಿಐ ಅಧಿಕಾರ ಸ್ವೀಕರಿಸಿದ್ದಾರೆ. ಇದು ಮೊದಲನೆ ಬಾರಿ ಏನಲ್ಲ. ಒಂದು ಬಾರಿ ಹೊಸ ಜವಾಬ್ದಾರಿ ತೆಗೆದುಕೊಂಡ ಬಳಿಕ ಅವರು ಆರ್‌ಬಿಐಯ ಸ್ವಾಯತ್ತತೆ ಸಮರ್ಥಿಸಿಕೊಳ್ಳಬೇಕು’’ ಎಂದು ಇಲ್ಲಿನ ಐಜಿಐಡಿಆರ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಅವರು ಹೇಳಿದರು.

ಆರ್‌ಬಿಐಯ ಸ್ವಾಯತ್ತತೆಯನ್ನು ಯಾವುದೇ ರೀತಿಯಲ್ಲಿ ಬಲಿ ನೀಡದೆ ಆರ್‌ಬಿಐ ಹಾಗೂ ಸರಕಾರದ ನಡುವೆ ಉತ್ತಮ ಹೊಂದಾಣಿಕೆ ಯೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಅವರಿಗಿದೆ ಎಂದು ಅವರು ಹೇಳಿದರು.

ಜಿಡಿಪಿ ಲೆಕ್ಕಾಚಾರದ ಇತ್ತೀಚೆಗಿನ ಬದಲಾವಣೆ ಕುರಿತು ಕೆಲವು ಪ್ರಮುಖ ಬದಲಾವಣೆಗಳನ್ನು ಕೇಂದ್ರ ಅಂಕಿ-ಅಂಶ ಕಚೇರಿ (ಸಿಎಸ್‌ಒ) ಬಹಿರಂಗಪಡಿಸುವ ಅಗತ್ಯತೆ ಇದೆ ಎಂದು ಪ್ರಧಾನಿ ಅವರ ಆರ್ಥಿಕ ಸಲಹೆಗಾರರ ಮಂಡಳಿ ವರಿಷ್ಠರಾಗಿರುವ ರಂಗರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News