ಈ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಇಲಿ ಮಾಂಸಕ್ಕೆ 200 ರೂ.!

Update: 2018-12-26 17:08 GMT

ಅಸ್ಸಾಂ, ಡಿ.26: ಇಲ್ಲಿನ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುವ ವಸ್ತುಗಳಲ್ಲಿ ಈಗಷ್ಟೇ ಹಿಡಿದು ತಂದ ಇಲಿಯೂ ಒಂದು. ಅಸ್ಸಾಂನ ಕುಮಾರಿಕಟ ಗ್ರಾಮದಲ್ಲಿ ರವಿವಾರದ ಸಂತೆಯಲ್ಲಿ ಕೋಳಿ ಮತ್ತು ಇತರ ಮಾಂಸಗಳಿಗಿಂತ ಪ್ರಸಿದ್ಧವಾಗಿರುವುದು ಚರ್ಮ ಸುಲಿದ ಇಲಿಗಳ ಮಾಂಸ.

ತಮ್ಮ ಬೆಳೆಗಳನ್ನು ರಕ್ಷಿಸಲು ರೈತರು ಹಿಡಿದ ನೂರಾರು ಇಲಿಗಳನ್ನು ಮಾರುಕಟ್ಟೆಯ ವ್ಯಾಪಾರಿಗಳು ಖರೀದಿಸುತ್ತಾರೆ. ಇಲ್ಲಿನ ಬಡವರಿಗೆ ಇಲಿ ಮಾರಾಟ ವರದಾನವಾಗಿಯೂ ಪರಿಣಮಿಸಿದೆ. ಇಲ್ಲಿನ ಬುಡಕಟ್ಟು ಜನರಿಗೆ ಆದಾಯದ ಮೂಲವೂ ಆಗಿದೆ.

ಇಲ್ಲಿ ಒಂದು ಕೆ.ಜಿ. ಇಲಿ ಮಾಂಸಕ್ಕೆ 200 ರೂ. ಬೆಲೆಯಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಇಲಿಗಳ ಹಾವಳಿಯೂ ಹೆಚ್ಚಿದೆ. “ಬೆಳೆಗಳನ್ನು ತಿನ್ನಲು ಬರುವ ಇಲಿಗಳಿಗಾಗಿ ನಾವು ಬೋನುಗಳನ್ನು ಇರಿಸುತ್ತೇವೆ” ಎಂದು ಇಲಿ ವ್ಯಾಪಾರಿ ಕುಮಾರಿಕಟಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News