ಎನ್‌ಆರ್‌ಸಿ ಸಂಪೂರ್ಣ ಪರಿಷ್ಕಾರ: ಜೂನ್ 30ರವರೆಗೆ ಮುಂದೂಡಿಕೆ

Update: 2018-12-27 17:02 GMT

ಹೊಸದಿಲ್ಲಿ, ಡಿ. 27: ಅಸ್ಸಾಂನ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಪರಿಷ್ಕರಿಸಲು ನಡೆಯುತ್ತಿರುವ ಕಾರ್ಯಾಚರಣೆ ಪೂರ್ಣಗೊಳಿಸಲು ಸಮಯ ಮಿತಿಯನ್ನು ಕೇಂದ್ರ ಸರಕಾರ ಜೂನ್ 30ರವರೆಗೆ ವಿಸ್ತರಿಸಿದೆ.

ಅಸ್ಸಾಂನ ನಾಗರಿಕ ಪಟ್ಟಿ ಎನ್‌ಆರ್‌ಸಿ ಪರಿಷ್ಕರಣೆ ನಿಗದಿತ 2018 ಡಿಸೆಂಬರ್ 31ರ ಒಳಗಡೆ ಪೂರ್ಣಗೊಳ್ಳದು. ಆದುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅಧಿಸೂಚನೆಯಲ್ಲಿ ತಿಳಿಸಿದೆ. 1951ರ ರಾಷ್ಟ್ರೀಯ ನಾಗರಿಕ ನೋಂದಣಿಯ ಪರಿಷ್ಕರಣೆಗೆ ಸಂಬಂಧಿಸಿ ನಮೂದನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪೂರ್ಣಗೊಳಿಸುವುದು ಅಗತ್ಯವಾಗಿರುವುದರಿಂದ ಕೇಂದ್ರ ಸರಕಾರ ಸಮಯದ ಮಿತಿಯನ್ನು 2019 ಜೂನ್ 30ರ ವರೆಗೆ ವಿಸ್ತರಿಸಿದೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಶೈಲೇಶ್ ಹೇಳಿದ್ದಾರೆ.

ಸಂಪೂರ್ಣ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮೂರು ವರ್ಷಗಳ ಒಳಗೆ ಪೂರ್ಣಗೊಳಿಸುವಂತೆ ಸಮಯ ಮಿತಿ ನೀಡಿ ಕೇಂದ್ರ ಸರಕಾರ 2013 ಡಿಸೆಂಬರ್ 6ರಂದು ಅಧಿಸೂಚನೆ ಹೊರಡಿಸಿತ್ತು. ಕಾರ್ಯಾಚರಣೆ ಸಂಪೂರ್ಣವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಂತಿಮ ದಿನಾಂಕದ ಗಡುವನ್ನು ಐದು ಬಾರಿ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News