ನ್ಯೂಝಿಲೆಂಡ್ ಬಿಗಿ ಹಿಡಿತ

Update: 2018-12-27 19:06 GMT

ಕ್ರೈಸ್ಟ್‌ಚರ್ಚ್, ಡಿ.27: ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ 6 ವಿಕೆಟ್ ಗೊಂಚಲು, ಟಾಮ್ ಲಥಮ್ ಹಾಗೂ ಜೀತ್ ರಾವಲ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಬಿಗಿಹಿಡಿತ ಸಾಧಿಸಿದೆ.

ಗುರುವಾರ ಎರಡನೇ ದಿನದಾಟ ಕೊನೆಗೊಂಡಾಗ ನ್ಯೂಝಿಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 231 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆ ಮೂಲಕ 305 ರನ್‌ಗಳ ಭಾರೀ ಮುನ್ನಡೆ ಕಾಯ್ದುಕೊಂಡಿದೆಯಲ್ಲದೆ ಆ ತಂಡದ ಇನ್ನೂ ಎಂಟು ವಿಕೆಟ್ ಕೈಯಲ್ಲಿವೆ.

ಪ್ರಥಮ ದಿನದಾಟದಲ್ಲಿ 88 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಲಂಕಾಗೆ ಗುರುವಾರ ಬೌಲ್ಟ್ ಅಕ್ಷರಶಃ ಬೆಂಕಿಯುಗುಳಿದರು. ಎರಡನೇ ದಿನದಾಟದಲ್ಲಿ ಅವರು 15 ಎಸೆತಗಳಲ್ಲಿ 4 ರನ್ ನೀಡಿ ಪಡೆದ 6 ವಿಕೆಟ್‌ನಿಂದಾಗಿ ಲಂಕಾ 104 ರನ್‌ಗೆ ಸರ್ವಪತನ ಕಂಡಿತು. ಆ್ಯಂಜೆಲೊ ಮ್ಯಾಥ್ಯೂಸ್(ಅಜೇಯ 33) ಮಾತ್ರ ಕಿವೀಸ್‌ಗೆ ಅಲ್ಪ ಪ್ರತಿರೋಧ ತೋರಿದರು. ಪ್ರಥಮ ಇನಿಂಗ್ಸ್‌ನಲ್ಲಿ ದೊರೆತ 74 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕಿವೀಸ್‌ಗೆಲಥಮ್(ಅಜೇಯ 74) ಹಾಗೂ ಜೀತ್ ರಾವಲ್(74) ಮೊದಲ ವಿಕೆಟ್ ಜೊತೆಯಾಟದಲ್ಲಿ 195 ರನ್ ಜಮೆ ಮಾಡಿದರು. ಕೇನ್ ವಿಲಿಯಮ್ಸನ್(48) ಅನವಶ್ಯಕ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿದರು. ರಾಸ್ ಟೇಲರ್(25) ಹಾಗೂ ಲಥಮ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಂಕಾ ಪರ ಕುಮಾರ ಹಾಗೂ ಪೆರೇರ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News