×
Ad

ವಿದೇಶಿ ಹೂಡಿಕೆಯ ಇ-ಕಾಮರ್ಸ್ ಕಂಪೆನಿಗಳ ಮೇಲೆ ನಿರ್ಬಂಧ: ಭಾರತದ ಕ್ರಮಕ್ಕೆ ಅಮೆರಿಕದ ಆಕ್ಷೇಪ

Update: 2018-12-29 22:43 IST

ವಾಶಿಂಗ್ಟನ್,ಡಿ.29: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ವಿದೇಶಿ ಇ-ಕಾಮರ್ಸ್ ಕಂಪೆನಿಗಳ ಮೇಲೆ ತನ್ನ ನಿರ್ಬಂಧಗಳನ್ನು ಭಾರತ ಬಿಗಿಗೊಳಿಸಿರುವ ಬಗ್ಗೆ ಅಮೆರಿಕದ ಸಂಸ್ಥೆಗಳ ಕೈಗಾರಿಕಾ ಸಂಘಟನೆಯೊಂದು ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ನಡೆಯು ಗ್ರಾಹಕರು ಹಾಗೂ ವಿದೇಶಿ ನೇರ ಹೂಡಿಕೆಯ ಮೇಲೆ ದೀರ್ಘಾವಧಿಯ ನಕಾರಾತ್ಮಕ ಪರಿಣಾಮವನ್ನು ಬೀರಲಿದೆಯೆಂದು ಅದು ಹೇಳಿದೆ.

ಈ ವಾರದ ಆರಂಭದಲ್ಲಿ ಭಾರತವು ಸರಕಾರವು ಇ-ಕಾಮರ್ಸ್ ವಲಯದಲ್ಲಿನ ತನ್ನ ವಿದೇಶಿ ನೇರಹೂಡಿಕೆ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿತ್ತು. ಈ ಕ್ರಮಗಳು ಜಾರಿಗೆ ಬಂದಲ್ಲಿ ವಿದೇಶಿ ಹೂಡಿಕೆಯ ಆನ್‌ಲೈನ್ ಮಾರಾಟಸಂಸ್ಥೆಗಳು ದರಕಡಿತ ಹಾಗೂ ಕ್ಯಾಶ್‌ಬಾಕ್ ಕೊಡುಗೆಗಳನ್ನು ಕೊನೆಗೊಳಿಸಬೇಗುತ್ತದೆ.

ವಿದೇಶಿ ನೇರಹೂಡಿಕೆಯ ಇ-ಕಾಮರ್ಸ್ ಸಂಸ್ಥೆಗಳ ಕುರಿತ ನೂತನ ನಿಯಮಗಳು 2019ರ ಫೆಬ್ರವರಿಯಿಂದ ಜಾರಿಗೆ ಬರುವ ನಿರೀಕ್ಷೆಯಿದ್ದು, ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ದಿಗ್ಗಜ ಇ-ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಝಾನ್ ತೀವ್ರವಾಗಿ ಬಾಧಿತವಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News