2018ರಲ್ಲಿ ಎಟಿಎಂಗಳ ಸಂಖ್ಯೆ 1,000 ಇಳಿಕೆ: ಆರ್‌ಬಿಐ

Update: 2018-12-30 18:04 GMT

ಮುಂಬೈ,ಡಿ.30: ಆರ್ಥಿಕ ವರ್ಷ 2018ರಲ್ಲಿ ದೇಶದಲ್ಲಿ ಎಟಿಎಂಗಳ ಸಂಖ್ಯೆ ಒಂದು ಸಾವಿರದಷ್ಟು ಇಳಿಕೆಯಾಗಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಆರ್ಥಿಕ ವರ್ಷ 2017ರಲ್ಲಿ 2.08 ಲಕ್ಷ ಇದ್ದ ಎಟಿಎಂಗಳ ಸಂಖ್ಯೆ 2018ರ ವೇಳೆಗೆ 2.07 ಲಕ್ಷಕ್ಕೆ ಕುಸಿದಿದೆ ಎಂದು ಆರ್‌ಬಿಐಯ ವಾರ್ಷಿಕ ವರದಿ ತಿಳಿಸಿದೆ.

ಬ್ಯಾಂಕ್ ಶಾಖೆಗಳ ಆವರಣದಲ್ಲಿ ಕಾರ್ಯಾಚರಿಸುವ ಎಟಿಎಂಗಳ ಸಂಖ್ಯೆ 1.09 ಲಕ್ಷದಿಂದ 1.06 ಲಕ್ಷಕ್ಕೆ ಕುಸಿದಿದ್ದರೆ, ಪ್ರತ್ಯೇಕವಾಗಿ ಕಾರ್ಯಾಚರಿಸುವ ಎಟಿಎಂಗಳ ಸಂಖ್ಯೆ 98,545ರಿಂದ ಒಂದು ಲಕ್ಷಕ್ಕೆ ಏರಿಕೆಯಾಗಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎಟಿಎಂಗಳ ಸಂಖ್ಯೆ 1.40 ಲಕ್ಷದಿಂದ 1.45 ಲಕ್ಷಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ. ಇದೇ ವೇಳೆ ಖಾಸಗಿ ವಲಯದ ಬ್ಯಾಂಕ್‌ಗಳು 2018ರಲ್ಲಿ ತಮ್ಮ ಎಟಿಎಂಗಳ ಸಂಖ್ಯೆಯನ್ನು 58,833ರಿಂದ 60,145ಕ್ಕೆ ಏರಿಸಿಕೊಂಡಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News