ಪೆಟ್ರೋಲ್‌ ದರ 22 ಪೈಸೆ ಇಳಿಕೆ: ಈ ವರ್ಷದ ಅತಿ ಕಡಿಮೆ ಬೆಲೆ

Update: 2018-12-30 18:18 GMT

ಹೊಸದಿಲ್ಲಿ, ಡಿ. 30: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರವಿವಾರ 22 ಪೈಸೆ ಇಳಿಕೆಯಾಗಿದೆ. ಇದು 2018ರಲ್ಲಿ ಅತಿ ಕಡಿಮೆ ಬೆಲೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 23 ಪೈಸೆ ಇಳಿಕೆಯಾಗಿದೆ. ಇದು ಕಳೆದ 9 ತಿಂಗಳಲ್ಲಿ ಅತಿ ಕಡಿಮೆ ಬೆಲೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 69.26 ರಿಂದ ರೂ. 69.04ಕ್ಕೆ ಇಳಿಕೆಯಾಗಿದೆ.

ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 63.32 ರಿಂದ ರೂ. 63.09ಕ್ಕೆ ಇಳಿಕೆಯಾಗಿದೆ. ಒಂದು ದಿನ ಹೊರತುಪಡಿಸಿ ಅಕ್ಟೋಬರ್ 18ರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಮಾರ್ಚ್ ಅಂತ್ಯದ ಬಳಿಕ ಇದು ಅತಿ ಕಡಿಮೆ. ಒಟ್ಟಾಗಿ, ಅಕ್ಟೋಬರ್ 18ರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 13.79 ಇಳಿಕೆಯಾಗಿದೆ.

ಡೀಸೆಲ್ ಬೆಲೆ ಎರಡೂವರೆ ತಿಂಗಳಲ್ಲಿ ಪ್ರತಿ ಲೀಟರ್‌ಗೆ ರೂ. 12.06 ಇಳಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ದಾಖಲಾರ್ಹ ರೂ. 84ಕ್ಕೆ ಏರಿಕೆಯಾಗಿತ್ತು ಹಾಗೂ ಮುಂಬೈಯಲ್ಲಿ ರೂ. 91.34ಕ್ಕೆ ಏರಿಕೆಯಾಗಿತ್ತು. ಇದೇ ದಿನ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ರೂ. 75.45ಕ್ಕೆ ಏರಿಕೆಯಾಗಿತ್ತು ಹಾಗೂ ಮುಂಬೈಯಲ್ಲಿ ಪ್ರತಿ ಲೀಟರ್‌ಗೆ ರೂ. 80.10ಕ್ಕೆ ಏರಿಕೆಯಾಗಿತ್ತು. ಆಗಸ್ಟ್ 16ರಂದು ಬೆಲೆ ಏರಿಕೆ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News