ಗಣಿಕಾರ್ಮಿಕರ ದಯನೀಯ ಬದುಕು

Update: 2018-12-30 18:33 GMT

ಮಾನ್ಯರೇ,

ಮೇಘಾಲಯದ 320 ಅಡಿ ಆಳದಲ್ಲಿ 15ಕ್ಕೂ ಅಧಿಕ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸರಕಾರ ಅವರನ್ನು ರಕ್ಷಿಸಲು ಈವರೆಗೆ ವಿಫಲವಾಗಿದೆ. ಇಂದು ಕಲ್ಲಿದ್ದಲು ಈ ದೇಶದ ವಿದ್ಯುತ್ ಕ್ಷೇತ್ರಕ್ಕೆ ಸಾಕಷ್ಟು ದೊಡ್ಡ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆದರೆ ಆ ಗಣಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಬದುಕು ಎಂತಹ ಕತ್ತಲಲ್ಲಿದೆ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ದೇಶಕ್ಕೆ ನೆನಪಿಸಿದೆ. ಕಲ್ಲಿದ್ದಲು ಗಣಿ ಕಾರ್ಮಿಕರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳು, ಹಾಗೆಯೇ ಅವರು ಮುಖಾಮುಖಿಯಾಗಬೇಕಾದ ಅಪಾಯಗಳನ್ನು ನಾವು ಗಮನಿಸಬೇಕಾಗಿದೆ. ಇಂದು ಕೋಮುಗಲಭೆಗಳಲ್ಲಿ ಪರಸ್ಪರ ಹೊಡೆದಾಡಿಕೊಂಡು ಸತ್ತವರಿಗೆ ಸರಕಾರ ಲಕ್ಷಗಟ್ಟಲೆ ಪರಿಹಾರವನ್ನು ಘೋಷಿಸುತ್ತದೆ. ಇದೇ ಸಂದರ್ಭದಲ್ಲಿ ಈ ಗಣಿ ಕಾರ್ಮಿಕರು ಪ್ರಾಣ ಒತ್ತೆಯಿಟ್ಟು ಮಾಡುವ ಕಾಯಕಗಳನ್ನು ನಿರ್ಲಕ್ಷದಿಂದ ನೋಡುತ್ತಿದೆ. ಗಣಿ ಕಾರ್ಮಿಕರ ಬದುಕನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಬೇಜವಾಬ್ದಾರಿಯಿಂದ ಅವರನ್ನು ಮೃತ್ಯು ಕೂಪದೆಡೆಗೆ ನೂಕುವ ಸಂಬಂಧ ಪಟ್ಟ ಅಧಿಕಾರಿಗಳನ್ನು ಈ ನಿಟ್ಟಿನಲ್ಲಿ ತನಿಖೆಗೆ ಒಳಪಡಿಸಬೇಕು. ಹಾಗೆಯೇ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸರಕಾರ ಕನಿಷ್ಠ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕಾಗಿದೆ.

Writer - ಸಿದ್ದಯ್ಯ, ಎಲ್ಲಾಪುರ

contributor

Editor - ಸಿದ್ದಯ್ಯ, ಎಲ್ಲಾಪುರ

contributor

Similar News