ಗುಜರಾತ್: ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಹತ್ತು ಮಂದಿ ಬಲಿ

Update: 2018-12-31 07:54 GMT

ಗುಜರಾತ್, ಡಿ.31: ಕಛ್ ಜಿಲ್ಲೆಯ ಭಚವು ಹೆದ್ದಾರಿಯಲ್ಲಿ ರವಿವಾರ ಸಂಭವಿಸಿದ ಭೀಕರ ವಾಹನ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಹತ್ತು ಮಂದಿ ದಾರುಣ ಸಾವನ್ನಪ್ಪಿದ್ದಾರೆ.

ಎರಡು ಟ್ರಕ್ ಮತ್ತು ಎಸ್‌ಯುವಿ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಉಪ್ಪು ಸಾಗಾಟ ನಡೆಸುತ್ತಿದ್ದ ಟ್ರೇಲರ್ ಟ್ರಕ್ ಡಿವೈಡರ್ ಮೇಲಿಂದ ಸಾಗಿ ರಸ್ತೆಯ ಇನ್ನೊಂದು ಬದಿಗೆ ಸರಿದ ಪರಿಣಾಮ ಅಲ್ಲಿ ಸಾಗುತ್ತಿದ್ದ ಎಸ್‌ಯುವಿಗೆ ಢಿಕ್ಕಿ ಹೊಡೆದಿದೆ. ಇದೇ ಸಂದರ್ಭ ಇನ್ನೊಂದು ಟ್ರಕ್ ಎಸ್‌ಯುವಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿ ಒಟ್ಟು 11 ಮಂದಿ ಇದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅವರೆಲ್ಲರೂ ತಮ್ಮ ಊರಾದ ಭಚವು ಎಂಬಲ್ಲಿಂದ ಭುಜ್ ನಗರಕ್ಕೆ ಪಯಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಸಾವಿಗೀಡಾದವರ ಸಂಬಂಧಿಕರಿಗೆ ಎಲ್ಲಾ ಅಗತ್ಯ ನೆರವು ಒದಗಿಸುವಂತೆ ಮುಖ್ಯಮಂತ್ರಿ ವಿಜಯ್ ರುಪಾನಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News