ಕ್ರಿಮಿನಲ್ ಮಾನನಷ್ಟ ಮೊಕದ್ದಮೆ: ಅರ್ನಾಬ್ ಗೋಸ್ವಾಮಿಗೆ ಶ್ರೀನಗರ ಕೋರ್ಟ್ ಸಮನ್ಸ್

Update: 2018-12-31 08:24 GMT

ಹೊಸದಿಲ್ಲಿ, ಡಿ.31: ಮಾಜಿ ಸಚಿವ ಹಾಗು ಪಿಡಿಪಿ ನಾಯಕ ನಯೀಮ್ ಅಖ್ತರ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಕೋರ್ಟ್ ಮುಂದೆ ಹಾಜರಾಗುವಂತೆ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿಯವರಿಗೆ ಶ್ರೀನಗರ ಕೋರ್ಟ್ ನಿರ್ದೇಶಿಸಿದೆ.

ಫೆಬ್ರವರಿ 9ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಅರ್ನಾಬ್ ಗೆ ನ್ಯಾಯಾಲಯವು ಸೂಚಿಸಿದೆ.

ತನ್ನ ವಿರುದ್ಧ ಗೋಸ್ವಾಮಿ ಭ್ರಷ್ಟಾಚಾರದ ಕುರಿತಂತೆ ‘ನಿರಾಧಾರ ಮತ್ತು ತಿರುಚಿದ’ ಆರೋಪಗಳನ್ನು ಹೊರಿಸಿದ್ದಾರೆ ಎಂದು ಮಾಜಿ ಸಚಿವ ನಯೀಮ್ ಅಖ್ತರ್ ಆರೋಪಿಸಿದ್ದಾರೆ. ಪಿಡಿಪಿ ಶಾಸಕ ಆಬಿದ್ ಅನ್ಸಾರಿ, ಬಿಜೆಪಿಯ ಖಾಲಿದ್ ಜಹಂಗೀರ್, ರಿಪಬ್ಲಿಕ್ ಟಿವಿಯ ಝೀನತ್ ಝೀಶಾನ್ ಫಾಝಿಲ್, ಆದಿತ್ಯ ರಾಜ್ ಕೌಲ್ ಮತ್ತು ಸಕಾಲ್ ಭಟ್ ವಿರುದ್ಧವೂ ನಯೀಮ್ ಆರೋಪಿಸಿದ್ದಾರೆ.

ರಿಪಬ್ಲಿಕ್ ಟಿವಿಯಲ್ಲಿ ‘ಮಾನಹಾನಿಕರ ಮತ್ತು ದುರುದ್ದೇಶಪೂರಿತ’ ಸುದ್ದಿ ಪ್ರಕಟವಾಗಿದೆ ಎಂದು ಸೆಪ್ಟಂಬರ್ 1ರಂದು ಅಖ್ತರ್ ರಿಪಬ್ಲಿಕ್ ಟಿವಿ ಮತ್ತು ಬಿಜೆಪಿ ನಾಯಕ ಖಾಲಿದ್ ಜಹಂಗೀರ್ ಗೆ ಕಾನೂನು ನೋಟಿಸ್ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News