'ಕಾಲಿಯಾ'ದಿಂದ 'ಕರ್ಮ'ದವರೆಗೆ: ಖಾದರ್ ಖಾನ್ ಖಡಕ್ ಡೈಲಾಗ್ ಗಳಿವು…

Update: 2019-01-01 10:59 GMT

“ಐಸಾ ತೋ ಆದ್ಮಿ ಲೈಫ್ ಮೇ ದೋ ಹೀ ಟೈಮ್ ಭಾಗ್ತಾ ಹೈ.... ಒಲಿಂಪಿಕ್ ಕಾ ರೇಸ್ ಹೋ ಯಾ ಫಿರ್ ಪೊಲೀಸ್ ಕಾ ಕೇಸ್ ಹೋ. ತುಮ್ ಕಾಯ್ ಕೋ ಭಾಗ್ತಾ ಹೇ ಮೆನ್ ? (ಮನುಷ್ಯ ಜೀವನದಲ್ಲಿ ಹೀಗೆ ಕೇವಲ ಎರಡು ಕಾರಣಗಳಿಗಾಗಿ ಓಡುತ್ತಾನೆ, ಒಂದು ಒಲಿಂಪಿಕ್ ರೇಸಿನಲ್ಲಿ ಹಾಗೂ ಇನ್ನೊಂದು ಪೊಲೀಸ್ ಕೇಸಿನಲ್ಲಿ. ನೀವು ಏತಕ್ಕಾಗಿ ಓಡುತ್ತಿದ್ದೀರಿ?''…. 1977ರ ಹಿಟ್ ಚಿತ್ರ ‘ಅಮರ್ ಅಕ್ಬರ್ ಆ್ಯಂಟನಿ’ಯಲ್ಲಿ ಅಮಿತಾಭ್ ಬಚ್ಚನ್ ಆಡಿದ ಮಾತುಗಳಿವು.

70ರ ಹಾಗೂ 80ರ ದಶಕಗಳಲ್ಲಿ ಅಮಿತಾಭ್ ಚಿತ್ರಗಳೆಂದರೆ ಅವುಗಳಲ್ಲಿ ಅವರ ಡೈಲಾಗ್ ಗಳು ಚಿತ್ರಪ್ರೇಮಿಗಳ ಮನಸ್ಸನ್ನು ನಾಟುತ್ತಿದ್ದವು. ಅಮಿತಾಭ್ ಗೆ ಒಂದು ದೊಡ್ಡ ಇಮೇಜ್ ಅನ್ನೇ ಈ ಡೈಲಾಗ್ ಗಳು ತಂದು ಕೊಟ್ಟಿದ್ದವು. ಅಂದ ಹಾಗೆ ಜನರ ಮನಸ್ಸಿಗೆ ನಾಟುವಂತಹ ಡೈಲಾಗ್ ಗಳನ್ನು ಬರೆದಿದ್ದವರು ಇಂದು ನಿಧನರಾದ ಹಿರಿಯ ನಟ ಖಾದರ್ ಖಾನ್. ಕಟು ಸತ್ಯವನ್ನು ಸ್ವಲ್ಪ ವಿಡಂಬನೆಯ ಲೇಪನವಿದ್ದ ಅವರ ಈ ಅಪ್ರತಿಮ ಶೈಲಿಯ ಡೈಲಾಗ್ ರಚನೆಯಿಂದಾಗಿಯೇ ನಟರಾಗಿರುವ ಹೊರತಾಗಿಯೂ ಅವರು ಬಹಳಷ್ಟು ಬೇಡಿಕೆಯ ಸಂಭಾಷಣೆ ಬರಹಗಾರರೂ ಆಗಿದ್ದರು.

ಅವರು ರಚಿಸಿದ ಕೆಲವೊಂದು ಚಿರಸ್ಮರಣೀಯ ಡೈಲಾಗ್ ಗಳು ಇಲ್ಲಿವೆ.

►“ಹಮ್ ಜಹಾ ಖಡೇ ಹೋತೇ ಹೈ, ಲೈನ್ ವಹೀಂ ಸೇ ಶುರು ಹೋತಾ ಹೈ'' (ನಾವು ಎಲ್ಲಿ ನಿಲ್ಲುತ್ತೇವೆಯೋ ಅಲ್ಲಿಂದಲೇ ಸರತಿ ಸಾಲು ಆರಂಭವಾಗುತ್ತದೆ)- ಕಾಲಿಯಾ (1981)

►“ಜಿಂದಾ ಹೈ ವೋ ಲೋಗ್ ಜೋ ಮೌತ್ ಸೇ ಟಕ್ರಾತೇ ಹೈ...'' (ಸಾವಿನೊಂದಿಗೆ ಸೆಣಸಾಡುವವರು ಮಾತ್ರ ಜೀವಂತವಿರುವವರು)- ಮುಖದ್ದರ್ ಕಾ ಸಿಕಂದರ್ (1978)

►“ಜಿಂದಗಿ ಮೇ ತೂಫಾನ್ ಆಯೇ, ಖಯಾಮತ್ ಆಯೇ... ಮಗರ್ ಕಭೀ ದೋಸ್ತೀ ಮೇ ದರಾರ್ ನ ಆನೇ ಪಾಯೇ'' (ಜೀವನದಲ್ಲಿ ಬಿರುಗಾಳಿಯೇ ಬೀಸಲಿ,  ಅಂತ್ಯವೇ ಬರಲಿ, ಆದರೆ ಗೆಳೆತನದಲ್ಲಿ ಯಾವತ್ತೂ ಬಿರುಕು ಮೂಡಬಾರದು) -ಆತಿಷ್ (1994)

►“ಅಪನ್ ಫೇಮಸ್ ಆದ್ಮಿ. ಬಡಾ ಬಡಾ ಪೇಪರ್ ಮೇ ಅಪನ್‍ ಕಾ ಛೋಟಾ ಛೋಟಾ ಫೊಟೋ ಚಪ್ತಾ ಹೈ' ( ನಾನು ಖ್ಯಾತ ವ್ಯಕ್ತಿ. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ನನ್ನ ಸಣ್ಣ ಸಣ್ಣ ಫೋಟೋ ಪ್ರಕಟವಾಗುತ್ತದೆ) -ಅಮರ್ ಅಕ್ಬರ್ ಆಂಟನಿ (1977)

►“ಇಸ್ ಥಪ್ಪಡ್ ಕೀ ಗುಂಜ್ ಸುನೀ ತುಮ್ನೆ?'' (ಈ ಕಪಾಳ ಮೋಕ್ಷದ ಸದ್ದು ನಿನಗೆ ಕೇಳಿಸಿತೇ ?) -ಕರ್ಮ (1986).

►“ವಿಜಯ್ ದೀನಾನಾತ್ ಚೌಹಾಣ್..... ಪೂರಾ ನಾಮ್” (ವಿಜಯ್ ದೀನಾನಾಥ್ ಚೌಹಾಣ್... ಪೂರ್ಣ ಹೆಸರು)- ಅಗ್ನಿಪಥ್ (1990)

►“ದುನಿಯಾ ಮೇರಾ ಘರ್ ಹೈ, ಬಸ್ ಸ್ಟ್ಯಾಂಡ್ ಮೇರಾ ಅಡ್ಡಾ ಹೈ.."" (ಈ ಜಗತ್ತೇ ನನ್ನ ಮನೆ, ಬಸ್ ಸ್ಟ್ಯಾಂಡ್ ನನ್ನ ಅಡ್ಡೆ)- ಕೂಲಿ ನಂ. 1 (1995)

►“ಖತ್ಲ್ ಕರ್ತೇ ಹೈ ಔರ್ ಹಾಥ್ ಮೇ ತಲ್ವಾರ್ ಭೀ ನಹೀನ್” (ಕೊಲೆ ಮಾಡುತ್ತೀರಿ, ಆದರೆ ಕೈಯಲ್ಲಿ ತಲವಾರು ಕೂಡ ಇಲ್ಲ)- ಖೂನ್ ಭರೀ ಮಾಂಗ್ (1988).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News