ಹೊಸವರ್ಷದ ಮೊದಲ ದಿನ ರೈಲು ನಿಲ್ದಾಣದಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿದ ಮಹಿಳೆ

Update: 2019-01-01 15:12 GMT
ಸಾಂದರ್ಭಿಕ ಚಿತ್ರ

ಪಾಲ್ಘರ್, ಜ. 1: ಹೊಸವರ್ಷದ ದಿನದಂದು ಮಹಾರಾಷ್ಟ್ರದ ರೈಲ್ವೆ ನಿಲ್ದಾಣದ ಕಾಯುವ ಕೊಠಡಿಯಲ್ಲಿ ಮಹಿಳೆಯೋರ್ವಳು ಅವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ. ತಾಯಿ ಛಾಯಾ ಸಾವ್ರ ಹಾಗೂ ಅವರ ಗಂಡು ಹಾಗೂ ಹೆಣ್ಣು ಮಗು ಆರೋಗ್ಯಯುತವಾಗಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ಮಹಿಳೆ ತನ್ನ ಪತಿ ಹಾಗೂ ಅತ್ತೆಯೊಂದಿಗೆ ಉಪ ನಗರದ ರೈಲಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ರೈಲು ಪಾಲ್ಘಾರ್ ರೈಲು ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಸರ್ವಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಪ್ರಥಮ ದರ್ಜೆ ಕಾಯುವ ಕೊಠಡಿಗೆ ಕರೆದೊಯ್ಯಲಾಯಿತು ಹಾಗೂ ವೈದ್ಯರಿಗೆ ಮಾಹಿತಿ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಸರ್ವಾ ಅವರಿಗೆ ಹೆರಿಗೆ ಮಾಡಿಸಲು ಕಾಂತಾ ಆಸ್ಪತ್ರೆಯ ಡಾ. ರಾಜೇಂದ್ರ ಚೌಹಾಣ್ ಅವರಿಗೆ ಡಾ. ಉಮೇಶ್ ಧುಮಾಲ್ವಾರ್ ನೆರವು ನೀಡಿದರು. ಮಕ್ಕಳು 2.50 ಕೆ.ಜಿ. ತೂಕವಿದ್ದು, ತಾಯಿ ಹಾಗೂ ಮಕ್ಕಳನ್ನು ಪಾಲ್ಘಾರ್ ಗ್ರಾಮೀಣ ಆಸ್ಪತ್ರೆಯಲ್ಲಿ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News