ಗೋ ಆರಾಧಕರು ಮೂರ್ಖರು: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕಾಟ್ಜು

Update: 2019-01-01 17:58 GMT

ಹೊಸದಿಲ್ಲಿ, ಜ. 1: ಗೋವುಗಳು ಕುದುರೆ, ನಾಯಿಗಳಂತೆ ಪ್ರಾಣಿಗಳು. ಆದುದರಿಂದ ಗೋವುಗಳನ್ನು ಆರಾಧಿಸುವವರು ಮೂರ್ಖರು ಎಂದು ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಖಟ್ಜು ಹೇಳಿದ್ದಾರೆ.

“ಜೂನ್‌ನಿಂದ ಡಿಸೆಂಬರ್ ವರೆಗೆ ನಾನು ಅಮೇರಿಕದಲ್ಲಿ ಇದ್ದೆ. ಗೋಮಾಂಸ ತಿನ್ನುವುದಕ್ಕೆ ಹತ್ಯೆ ನಡೆಸುತ್ತಿರುವುದಕ್ಕೆ ಅಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಈ ಸರಕಾರ ಜಗತ್ತಿನಾದ್ಯಂತ ನಮಗೆ ಅವಮಾನ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ. ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಪಾರ್ಕ್‌ಗೆ ನೀರು ಹಾಕಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಸ್ತ್ರಾಸ್ತ್ರಗಳಿಲ್ಲದೆ ಯಾವುದೇ ಸಮುದಾಯ ಶಾಂತಿಯುತವಾಗಿ ಸೇರುವ ಹಕ್ಕನ್ನು ಸಂವಿಧಾನದ ಕಲಂ 19 ನೀಡಿದೆ. ಆದುದರಿಂದ ಶುಕ್ರವಾರದ ಪ್ರಾರ್ಥನೆಯನ್ನು ಆದಿತ್ಯನಾಥ್ ಸರಕಾರ ನಿಲ್ಲಿಸಿರುವುದು ಅಸಂವಿಧಾನಿಕ. ಆರ್‌ಎಸ್‌ಎಸ್ ಪಾರ್ಕ್‌ಗಳಲ್ಲಿ ಶಾಖೆ ಮಾಡುತ್ತದೆ. ಆದರೆ, ಮುಸ್ಲಿಮರು ಪ್ರಾರ್ಥನೆ ಮಾಡುವುದಕ್ಕೆ ಮಾತ್ರ ಯಾಕೆ ನಿರಾಕರಿಸಬೇಕು ಎಂದರು.

 ಭಾರತದಲ್ಲಿ ‘ದಿ ಪ್ಲಾನೆಟ್ ಕೌ’ ಚಿತ್ರ ನಿರ್ಮಿಸಿದರೆ, ‘ದಿ ಪ್ಲಾನೆಟ್ ಏಪ್ಸ್’ಗಿಂತ 10 ಪಟ್ಟು ಆದಾಯ ಸಂಗ್ರಹಿಸಬಹುದು ಎಂದು ಕಾಟ್ಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News