ಹಿರಿಯ ನಟಿ ಮೌಸಮಿ ಚಟರ್ಜಿ ಬಿಜೆಪಿ ಸೇರ್ಪಡೆ
Update: 2019-01-02 21:17 IST
ಹೊಸದಿಲ್ಲಿ, ಜ.2: ಹಿರಿಯ ನಟಿ ಮೌಸಮಿ ಚಟರ್ಜಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 2004ರಲ್ಲಿ ಚಟರ್ಜಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಕ್ರಿಯ ರಾಜಕೀಯದಿಂದ ಕೆಲ ಸಮಯ ದೂರವಿದ್ದರು. ಇದೀಗ ಮಂಗಳವಾರ ದಿಲ್ಲಿಯಲ್ಲಿ ಉನ್ನತ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಭಿನಯದ ‘ಪೀಕು’ ಸೇರಿದಂತೆ ಹಲವು ಸಿನೆಮಗಳಲ್ಲಿ ಅಭಿನಯಿಸಿದ್ದಾರೆ.