ರಫೇಲ್ ವಿಚಾರದಲ್ಲಿ ಮೋದಿ 20 ನಿಮಿಷಗಳ ಚರ್ಚೆಗೆ ಬರಲಿ: ರಾಹುಲ್ ಸವಾಲು

Update: 2019-01-02 17:19 GMT

ಹೊಸದಿಲ್ಲಿ, ಜ.2: ರಫೇಲ್ ಡೀಲ್ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ತನ್ನೊಂದಿಗೆ 20 ನಿಮಿಷಗಳ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.

“ನಿರಂತರವಾಗಿ ಸುಳ್ಳು ಹೇಳುವ ಅಭ್ಯಾಸವಿದೆ. ಪಾರ್ಲಿಮೆಂಟ್ ನಲ್ಲಿ ರಫೇಲ್ ವಿಚಾರಕ್ಕೆ ಸಂಬಂಧಿಸಿ ಅವರ ನಿಲುವು ಟೊಳ್ಳಾಗಿದೆ. ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆದರೆ ಎರಡು ಹೆಸರುಗಳು ಹೊರಬರಲಿದೆ ಎನ್ನುವ ಬಗ್ಗೆ ನಮಗೆ ನಂಬಿಕೆಯಿದೆ. ಒಂದು ಅನಿಲ್ ಅಂಬಾನಿ ಹಾಗು ಮತ್ತೊಂದು ಪ್ರಧಾನಿ ಮೋದಿ” ಎಂದವರು ಹೇಳಿದರು.

ಇದೇ ಸಂದರ್ಭ ಗೋವಾ ಸಚಿವರದ್ದೆನ್ನಲಾದ ಆಡಿಯೋ ಬಗ್ಗೆ ಮಾತನಾಡಿದ ಅವರು, “ರಫೇಲ್ ಫೈಲ್ ಗಳು ಪಾರಿಕ್ಕರ್ ಮನೆಯಲ್ಲಿದೆ ಎನ್ನುವುದನ್ನು ಆಡಿಯೋ ತೋರಿಸಿಕೊಟ್ಟಿದೆ. ಪಾರಿಕ್ಕರ್ ಏನು ಹೇಳಿದ್ದಾರೆ ಎನ್ನುವುದನ್ನು ಇಡೀ ಸಂಪುಟವೇ ಆಲಿಸಿದೆ. ಅವರ ಜೊತೆಗಿರುವ ಮಾಹಿತಿಯಿಂದ ಪಾರಿಕ್ಕರ್ ಪ್ರಧಾನಿ ಮೋದಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News