ಮಮತಾ ಬ್ಯಾನರ್ಜಿಗೆ ಪ್ರಧಾನಿಯಾಗಲು ಉತ್ತಮ ಅವಕಾಶ: ಕುತೂಹಲ ಸೃಷ್ಟಿಸಿದ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ

Update: 2019-01-06 06:54 GMT

ಕೋಲ್ಕತಾ, ಜ.6: ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ  ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳುವ ಮೂಲಕ ಹೊಸ ವಿವಾದ ಸೃಷ್ಠಿಸಿದ್ದಾರೆ.

ಮಮತಾ ಬ್ಯಾನರ್ಜಿ  64ನೇ ಜನ್ಮ ದಿನವಾದ ಶನಿವಾರ ಶುಭಾಶಯಗಳನ್ನು ತಿಳಿಸಿರುವ ದಿಲೀಪ್ ಅವರು ಮಮತಾ ಬ್ಯಾನರ್ಜಿ  ಅವರಿಗೆ ಪಶ್ಚಿಮ ಬಂಗಾಳದಿಂದ ಪ್ರಧಾನಿ ಹುದ್ದೆಗೇರುವ  ಮೊದಲ ಮಹಿಳೆ ಎನಿಸಿಕೊಳ್ಳಲು ಎಲ್ಲ ಅರ್ಹತೆ ಇದೆ. ಪ್ರಧಾನಿ ರೇಸ್ ನಲ್ಲಿರುವ ನಾಯಕರುಗಳು ಪೈಕಿ ಮಮತಾ ಮುಂಚೋಣಿಯಲ್ಲಿದ್ದಾರೆ  ಎಂಬ ಹೇಳಿಕೆಯ ವಿಡಿಯೋವನ್ನು ದಿಲೀಪ್ ಘೋಷ್ ಯೂಟ್ಯೂಬ್ ಗೆ  ಶನಿವಾರ ರಾತ್ರಿ  9:15ಕ್ಕೆ ಅಪ್ಲೋಡ್ ಮಾಡಿದ್ದಾರೆ.

ಪ್ರಧಾನಮಂತ್ರಿ ಆಯ್ಕೆಯನ್ನು ಪಶ್ಚಿಮ ಬಂಗಾಳದಿಂದ ಮಾಡುವುದಾದರೆ, ಮಮತಾ ಅವರಿಗೆ ಉತ್ತಮ ಅವಕಾಶವಿದೆ.  ಈ ಮೊದಲು ಪಶ್ಚಿಮ ಬಂಗಾಳ  ಜ್ಯೋತಿ ಬಸುಗೆ ಪ್ರಧಾನಿ ಹುದ್ದೆಗೇರುವ  ಎಲ್ಲ ಅವಕಾಶ ಇತ್ತು. ಆದರೆ ಅವರ ಪಕ್ಷದವರು (ಸಿಪಿಐ-ಎಂ ) ಅವರನ್ನು ಪ್ರಧಾನಿ ಹುದ್ದೆಗೇರದಂತೆ ತಡೆದರು ಎಂದು ಹೇಳಿರುವ  ದಿಲೀಪ್ ಘೋಷ್ ನರೇಂದ್ರ ಮೋದಿ 2019ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಖಂಡಿತವಾಗಿಯೂ ಮುನ್ನಡೆಸುತ್ತಾರೆ. ಹೀಗಿದ್ದರೂ  ಮಮತಾ ಬ್ಯಾನರ್ಜಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಶುಭವಾಗಲಿ  ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News