ಎನ್ ಡಿಎಗೆ ಬಹುಮತಕ್ಕೆ 15 ಸ್ಥಾನಗಳ ಕೊರತೆ: ಇಂಡಿಯಾ ಟಿವಿ- ಸಿಎನ್ ಎಕ್ಸ್ ಸಮೀಕ್ಷೆ

Update: 2019-01-06 08:33 GMT

ಹೊಸದಿಲ್ಲಿ, ಜ.6: ದೇಶದಲ್ಲಿ ಇದೀಗ ಲೋಕಸಭಾ ಚುನಾವಣೆ ನಡೆದರೆ ಆಡಳಿತಾರೂಢ  ಬಿಜೆಪಿ ನೇತೃತ್ವದ ಎನ್ ಡಿಎಗೆ ಬಹುಮತ ಪಡೆಯಲು 15 ಸ್ಥಾನಗಳ ಕೊರತೆ ಉಂಟಾಗಬಹುದು ಎಂದು ಇಂಡಿಯಾ ಟಿವಿ –ಸಿಎನ್ ಎಕ್ಸ್ ಸಮೀಕ್ಷೆ ತಿಳಿಸಿದೆ.

ಡಿ.15ರಿಂದ 25ರ ತನಕ ನಡೆಸಲಾದ ಸಮೀಕ್ಷೆಯ ಪ್ರಕಾರ  ಎನ್ ಡಿಎ 543 ಲೋಕಸಭಾ ಕ್ಷೇತ್ರಗಳ ಪೈಕಿ 257 ಸ್ಥಾನಗಳನ್ನು  ,  ಕಾಂಗ್ರೆಸ್ ನೇತೃತ್ವದ ಯುಪಿಎ( ಎಸ್ ಪಿ –ಬಿಎಸ್ ಪಿ ರಹಿತ)  146 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಬಿಜೆಪಿಗೆ ಬಹುಮತ  ಮ್ಯಾಜಿಕ್ ಸಂಖ್ಯೆ 272 ಮುಟ್ಟಲು 15 ಸ್ಥಾನಗಳ ಕೊರತೆ ಉಂಟಾಗಬಹುದು ಎಂದು ತಿಳಿದು ಬಂದಿದೆ.

ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ಫಲಿತಾಂಶ ಹೊರ ಬದಮದ ಬಳಿಕ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಅದರಂತೆ ಎನ್ ಡಿಎ  ನೇತೃತ್ವ ವಹಿಸಿರುವ ಬಿಜೆಪಿ 223 ಸ್ಥಾನಗಳನ್ನು ಶಿವಸೇನಾ 8, ಜೆಡಿ(ಯು) 11 ಆಕಾಲಿ ದಳ 5,  ಎಲ್ ಜೆಪಿ 3, ಪಿಎಂಕೆ 1, ಎನ್ ಡಿಪಿಪಿ 1, ಎಐಎನ್ ಆರ್ ಸಿ 1, ಎನ್ ಪಿಪಿ 1, ಎಸ್ ಡಿಎಫ್ 1, ಅಪ್ನಾ ದಳ 1 ಮತ್ತು ಎಂಎನ್ ಎಫ್ 1.

ಯುಪಿಎ ಯ ನೇತೃತ್ವ ವಹಿಸಿರುವ ಕಾಂಗ್ರೆಸ್ 85 ಸ್ಥಾನ, ಡಿಎಂಕೆ 21, ಆರ್ ಜೆಡಿ 10, ಎನ್ ಸಿಪಿ 9, ಜೆಎಂಎಂ 4, ಜೆಡಿ(ಎಸ್) 4, ಆರ್ ಎಲ್ ಡಿ 2, ಆರ್ ಎಲ್ ಎಸ್ ಪಿ 1, ಆರ್ ಎಸ್ ಪಿ 1, ಐಯುಎಂಎಲ್ 2, ಟಿಡಿಪಿ 4, ಜೆಕೆ ನ್ಯಾಶನಲ್ ಕಾನ್ಫೆರೆನ್ಸ್ 2 ಮತ್ತು ಕೇರಳ ಕಾಂಗ್ರೆಸ್ (ಎಂ) 1.

ಇತರ: ಮಮತಾ ಬ್ಯಾನಜರ್ಜಿಯ ಟಿಎಂಸಿ 26, ಎಸ್ ಪಿ 20, ಬಿಎಸ್ ಪಿ 15, ವೈಎಸ್ ಆರ್ ಕಾಂಗ್ರೆಸ್್ 19, ಟಿಆರ್ ಎಸ್ 16, ಬಿಜು ಜನತಾದಳ 13, ಎಐಎಡಿಎಂಕೆ 10, ಎಎಂಎಂಕೆ 4, ಎಡರಂಗ 8, ಎಎಪಿ 2, ಎಐಯುಡಿಎಫ್್ 2, ಪಿಡಿಪಿ 1, ಜೆವಿಎಂ(ಪಿ) 1 ಮತ್ತು ಎಐಎಂಐಎಂ 1

ಕರ್ನಾಟಕದಲ್ಲಿ ಬಿಜೆಪಿ 15, ಕಾಂಗ್ರೆಸ್ 9, ಜೆಡಿಎಸ್ 4,  ಸ್ಥಾನಗಳನ್ನು ಪಡೆಯಲಿದೆ.  ಕೇರಳದಲ್ಲಿ ಕಾಂಗ್ರೆಸ್ 8, ಎಡರಂಗ 5, ಐಯುಎಂಎಲ್ 2, ಬಿಜೆಪಿ 1, ಕೆಸಿ(ಎಂ) 1, ಆರ್ ಎಸ್ ಪಿ 1, ಇತರ 2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News