ಗುರುತ್ವಾಕರ್ಷಣ ಅಲೆಗಳಿಗೆ ‘ಮೋದಿ ಅಲೆ’ ಎಂದು ಮರುನಾಮಕರಣ: ವಿಜ್ಞಾನಿಯ ಹೇಳಿಕೆ!

Update: 2019-01-06 08:39 GMT

ಚಂಡೀಗಢ, ಜ.6: ಆಧುನಿಕ ಭೌತವಿಜ್ಞಾನ ಹಾಗೂ ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್ ಮತ್ತು ಸರ್ ಐಸಾಕ್ ನ್ಯೂಟನ್ ಅವರ ಸಿದ್ಧಾಂತಗಳು ತಪ್ಪು ಎಂದು ಹೇಳುವ ಮೂಲಕ ತಮಿಳುನಾಡಿನ ವಿಜ್ಞಾನಿಯೊಬ್ಬರು 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‍ನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ದಂಗುಬಡಿಸಿದರು.

ಕಣ್ಣನ್ ಜೆಗಥಾಲ ಕೃಷ್ಣನ್ ಎಂಬವರು ಈ ಪ್ರತಿಪಾದನೆ ಮಾಡಿದ್ದು, ಆಧುನಿಕ ಭೌತವಿಜ್ಞಾನ ಇಡೀ ಜ್ಞಾನಶಾಖೆಯನ್ನೇ ಹಾಳುಗೆಡವಿದೆ. ಭೌತಶಾಸ್ತ್ರವನ್ನು ಹೊಸ ಅರ್ಥವು ಪ್ರತಿಪಾದನೆಗೆ ಬರಲಿದೆ ಎನ್ನುವುದನ್ನು ತಾನು ಕಂಡುಕೊಂಡಿರುವುದಾಗಿ ಅವರು ಹೇಳಿದರು.

ಕೃಷ್ಣನ್ ಅವರ LinkedIn ಪ್ರೊಫೈಲ್ ಪ್ರಕಾರ ಇವರು ತಮಿಳುನಾಡಿನ ಅಲಿಯಾರ್ ಎಂಬಲ್ಲಿರುವ ವರ್ಲ್ಡ್ ಕಮ್ಯುನಿಟಿ ಸರ್ವೀಸ್ ಸೆಂಟರ್‍ ನ ವಿವಿ ಶಿಕ್ಷಣದ ಸಂಯೋಜಕ ಹಾಗೂ ಹಿರಿಯ ಸಂಶೋಧನಾ ವಿಜ್ಞಾನಿ.

"21ನೇ ಶತಮಾನದಲ್ಲಿ ಸೂಪರ್ ಸ್ಟ್ಯಾಂಡರ್ಡ್ ಮಾಡೆಲ್ ವಿಶ್ವವನ್ನು ಆಳಲಿದೆ. ಇದನ್ನು ವೆಲ್ಲಾರಿಥಿ ಜಾಗತಿಕ ಮಾದರಿ ಎಂದು ಕರೆಯಲಾಗಿದೆ. ಆಧುನಿಕ ವಿಜ್ಞಾನವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲ ಮಾದರಿ ಇದಾಗಿದೆ" ಎಂದು ವಿವರಿಸಿದರು.

ನ್ಯೂಟನ್‍ ಗೆ ಗುರುತ್ವಾಕರ್ಷಣೆಯ ವಿಕರ್ಷಣ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಕೂಡಾ ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಅವರ ಲೆಕ್ಕಾಚಾರ ಸರಿಯಾಗಿದೆ. ಪ್ರಯೋಗಾತ್ಮಕ ಭೌತಶಾಸ್ತ್ರದಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪ್ರಯೋಗಗಳನ್ನು ಸರಿಯಾಗಿ ವಿಶ್ಲೇಷಿಸಲು ವಿಜ್ಞಾನಿಗಳು ವಿಫಲರಾಗಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಗುರುತ್ವಾಕರ್ಷಣ ಅಲೆಗಳನ್ನು ನರೇಂದ್ರ ಮೋದಿ ಅಲೆ ಎಂದು ಮರುನಾಮಕರಣ ಮಾಡಲಾಗುವುದು ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News