ತಕ್ಷಣ ಲೋಕಸಭಾ ಚುನಾವಣೆ ನಡೆದರೆ ಎನ್ ಡಿಎ ಸಿಗಲಿರುವ ಸ್ಥಾನಗಳೆಷ್ಟು?

Update: 2019-01-06 08:53 GMT

ಹೊಸದಿಲ್ಲಿ, ಜ.6: ತಕ್ಷಣ ಲೋಕಸಭಾ ಚುನಾವಣೆ ನಡೆದರೆ, ಎನ್‍ಡಿಎ ಬಹುಮತಕ್ಕೆ 15 ಸ್ಥಾನಗಳ ಕೊರತೆ ಎದುರಾಗಲಿದೆ ಎಂದು ಇಂಡಿಯಾ ಟಿವಿ- ಸಿಎನ್ ‍ಎಕ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.

ಈ ಸಮೀಕ್ಷೆಯನ್ನು ಡಿಸೆಂಬರ್ 15-25ರ ಅವಧಿಯಲ್ಲಿ ನಡೆಸಲಾಗಿದ್ದು, 543 ಕ್ಷೇತ್ರಗಳ ಪೈಕಿ ಎನ್‍ಡಿಎ 257 ಸ್ಥಾನಗಳನ್ನು ಪಡೆಯಲಿದೆ. ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದ್ದು, 15 ಸ್ಥಾನಗಳ ಕೊರತೆ ಎದುರಾಗಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎಗೆ 146 ಸ್ಥಾನಗಳು ಲಭ್ಯವಾಗಲಿದ್ದು, ಇದು ಎಸ್ಪಿ ಹಾಗೂ ಬಿಎಸ್ಪಿಯನ್ನು ಹೊರತುಪಡಿಸಿದ್ದಾಗಿರುತ್ತದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಅಂದರೆ ಕಾಂಗ್ರೆಸ್ ಸರ್ಕಾರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ನೂತನ ಸರ್ಕಾರ ರಚಿಸಿದ ಬಳಿಕ ನಡೆಸಿದ ಸಮೀಕ್ಷೆಯಾಗಿದೆ. 543 ಸದಸ್ಯಬಲದ ಲೋಕಸಭೆಯಲ್ಲಿ ಇತರ ಪಕ್ಷಗಳು 140 ಸ್ಥಾನಗಳನ್ನು ಗೆಲ್ಲಲಿದ್ದು, ಇವುಗಳ ನಿರ್ಧಾರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಇತರರಲ್ಲಿ ಸಮಾಜವಾದಿ ಪಕ್ಷ, ಬಿಎಸ್ಪಿ, ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ಟಿಆರ್‍ಎಸ್, ಬಿಜು ಜನತಾದಳ, ವೈಎಸ್‍ಆರ್ ಕಾಂಗ್ರೆಸ್, ಎಡರಂಗ, ಮೆಹಬೂಬ್ ಮುಫ್ತಿಯ ಪಿಡಿಪಿ, ಅಸಾಸುದ್ದೀನ್ ಉವೈಸಿಯ ಎಐಎಂಐಎಂ, ಎಐಯುಡಿಎಫ್, ಆಮ್ ಆದ್ಮಿ ಪಾರ್ಟಿ, ಜೆವಿಎಂ(ಪಿ), ಎಎಂಎಂಕೆ ಸೇರಿವೆ.

ಯುಪಿಎ ಯ ನೇತೃತ್ವ ವಹಿಸಿರುವ ಕಾಂಗ್ರೆಸ್ 85 ಸ್ಥಾನ, ಡಿಎಂಕೆ 21, ಆರ್ ಜೆಡಿ 10, ಎನ್ ಸಿಪಿ 9, ಜೆಎಂಎಂ 4, ಜೆಡಿ(ಎಸ್) 4, ಆರ್ ಎಲ್ ಡಿ 2, ಆರ್ ಎಲ್ ಎಸ್ ಪಿ 1, ಆರ್ ಎಸ್ ಪಿ 1, ಐಯುಎಂಎಲ್ 2, ಟಿಡಿಪಿ 4, ಜೆಕೆ ನ್ಯಾಶನಲ್ ಕಾನ್ಫೆರೆನ್ಸ್ 2 ಮತ್ತು ಕೇರಳ ಕಾಂಗ್ರೆಸ್ (ಎಂ) 1.

ಇತರ: ಮಮತಾ ಬ್ಯಾನರ್ಜಿಯ ಟಿಎಂಸಿ 26, ಎಸ್ ಪಿ 20, ಬಿಎಸ್ ಪಿ 15, ವೈಎಸ್ ಆರ್ ಕಾಂಗ್ರೆಸ್ 19, ಟಿಆರ್ ಎಸ್ 16, ಬಿಜು ಜನತಾದಳ 13, ಎಐಎಡಿಎಂಕೆ 10, ಎಎಂಎಂಕೆ 4, ಎಡರಂಗ 8, ಎಎಪಿ 2, ಎಐಯುಡಿಎಫ್ 2, ಪಿಡಿಪಿ 1, ಜೆವಿಎಂ(ಪಿ) 1 ಮತ್ತು ಎಐಎಂಐಎಂ 1

ಕರ್ನಾಟಕದಲ್ಲಿ ಬಿಜೆಪಿ 15, ಕಾಂಗ್ರೆಸ್ 9, ಜೆಡಿಎಸ್ 4,  ಸ್ಥಾನಗಳನ್ನು ಪಡೆಯಲಿದೆ.  ಕೇರಳದಲ್ಲಿ ಕಾಂಗ್ರೆಸ್ 8, ಎಡರಂಗ 5, ಐಯುಎಂಎಲ್ 2, ಬಿಜೆಪಿ 1, ಕೆಸಿ(ಎಂ) 1, ಆರ್ ಎಸ್ ಪಿ 1, ಇತರ 2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News