ತ್ರಿವಳಿ ತಲಾಕ್, ರಾಮಮಂದಿರ ವಿವಾದದಿಂದ ಎನ್‍ ಡಿಎಗೆ ಪೆಟ್ಟು: ಬಿಜೆಪಿ ಮಿತ್ರಪಕ್ಷದ ಚಿರಾಗ್ ಪಾಸ್ವಾನ್

Update: 2019-01-06 08:48 GMT

ಪಾಟ್ನಾ, ಜ.6: ವಿವಾದಾತ್ಮಕ ರಾಮಮಂದಿರ ವಿಚಾರ ಮತ್ತು ತ್ರಿವಳಿ ತಲಾಕ್‍ ನಂತಹ ವಿಚಾರಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ ಡಿಎಗೆ ಏಟು ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮಿತ್ರಪಕ್ಷವಾದ ಲೋಕ ಜನಶಕ್ತಿಯ ಮುಖಂಡ ಚಿರಾಗ್ ಪಾಸ್ವಾನ್ ಹೇಳಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷರಾಗಿರುವ ಚಿರಾಗ್, ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಮಗ. ಈ ಎರಡು ವಿಚಾರಗಳನ್ನು ಪ್ರಣಾಳಿಕೆಯಿಂದ ದೂರವಿಟ್ಟರೆ, ಎನ್‍ಡಿಎ ಮೈತ್ರಿಕೂಟ ಬಿಹಾರದಲ್ಲಿ 35-40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

"ಚುನಾವಣೆಯನ್ನು ಅಭಿವೃದ್ಧಿ ವಿಷಯಗಳ ಆಧಾರದಲ್ಲಿ ಎದುರಿಸಬೇಕು ಎನ್ನುವುದು ನನ್ನ ಬಯಕೆ. ವಿವಾದಾತ್ಮಕ ಅಂಶಗಳಾದ ರಾಮಮಂದಿರ ಹಾಗೂ ತ್ರಿವಳಿ ತಲಾಕ್ ವಿಚಾರವನ್ನು ಹೊರಗಿಡಬೇಕು. ಮೋದಿ ಹಾಗೂ ಎನ್‍ ಡಿಎ ಮಿತ್ರಪಕ್ಷಗಳು ಅಭಿವೃದ್ಧಿ, ಯುವಕರ ಸಮಸ್ಯೆಗಳು, ರೈತರು ಮತ್ತು ದುರ್ಬಲ ವರ್ಗದವರ ಸಮಸ್ಯೆಗಳನ್ನೇ ಪ್ರಮುಖವಾಗಿಟ್ಟುಕೊಂಡು ಚುನಾವಣೆ ಎದುರಿಸಬೇಕು” ಎಂದು ಅವರು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News