ಚೀನಾದ ಕಲ್ಲಿದ್ದಲು ವಿದ್ಯುತ್ ಯೋಜನೆ ಕೈಬಿಟ್ಟ ಪಾಕ್

Update: 2019-01-14 17:45 GMT

ಇಸ್ಲಾಮಾಬಾದ್, ಜ. 14: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಡಿಯಲ್ಲಿ ಸ್ಥಾಪನೆಯಾಗಬೇಕಾಗಿರುವ ಮಹತ್ವದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ಯೋಜನೆಯನ್ನು ಪಾಕಿಸ್ತಾನ ಸರಕಾರ ಕೈಬಿಡಲಿದೆ.

ಮುಂದಿನ ಹಲವು ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಈಗಾಗಲೇ ದೇಶ ಹೊಂದಿರುವುದರಿಂದ ಈ ಯೋಜನೆಯ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಪಾಕಿಸ್ತಾನ ಬಂದಿದೆ.

ಹಿಂದಿನ ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಸರಕಾರವು 1,320 ಮೆಗಾವ್ಯಾಟ್ ಸಾಮರ್ಥ್ಯದ ರಹೀಮ್ ಯಾರ್ ಖಾನ್ ವಿದ್ಯುತ್ ಯೋಜನೆಗಾಗಿ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಪಾಕಿಸ್ತಾನ ಈಗಾಗಲೇ ಹೊಂದಿರುವುದರಿಂದ, ಈ ಯೋಜನೆಯ ಅಗತ್ಯವಿಲ್ಲ ಎಂಬುದಾಗಿ ದೇಶದ ನೂತನ ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ (ಪಿಟಿಐ) ಸರಕಾರ ಚೀನಾಕ್ಕೆ ಅಧಿಕೃತವಾಗಿ ತಿಳಿಸಿದೆ ಎಂದು ‘ಡಾನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News