ಸರಕು ವಿಮಾನ ಪತನ: 15 ಸಾವು ಓರ್ವ ಪಾರು

Update: 2019-01-14 17:48 GMT

ಟೆಹರಾನ್, ಜ. 14: ಇರಾನ್‌ನ ದಶಕಗಳ ಹಳೆಯ ಬೋಯಿಂಗ್ 707 ಸೇನಾ ಸರಕು ವಿಮಾನವೊಂದು ಸೋಮವಾರ ರಾಜಧಾನಿ ಟೆಹರಾನ್‌ನಲ್ಲಿ ಭೂಸ್ಪರ್ಶ ನಡೆಸಲು ಯತ್ನಿಸುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿದೆ.

ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಓರ್ವ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.ಇರಾನ್‌ನಲ್ಲಿ ಹಾರುತ್ತಿರುವ ಹಳೆಯ ವಿಮಾನಗಳು ಜನರ ಸುರಕ್ಷತೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ.

ಜಾಗತಿಕ ಶಕ್ತ ದೇಶಗಳೊಂದಿಗೆ 2015ರಲ್ಲಿ ಇರಾನ್ ಮಾಡಿಕೊಂಡ ಪರಮಾಣು ಒಪ್ಪಂದದಲ್ಲಿ ಹೊಸ ವಿಮಾನಗಳನ್ನು ಖರೀದಿಸುವ ಅವಕಾಶ ಆ ದೇಶಕ್ಕೆ ಇತ್ತು. ಆದರೆ, ಕಳೆದ ವರ್ಷ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದು, ಇರಾನ್ ಮೇಲೆ ಮತ್ತೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ.

ವಿಮಾನವು ಕಿರ್ಗಿಸ್ತಾನ್‌ನಿಂದ ಮಾಂಸವನ್ನು ಒಯ್ಯುತ್ತಿತ್ತು ಎನ್ನಲಾಗಿದೆ.

ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಫಾತ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿದ್ದಾಗ ರನ್‌ವೇಯಿಂದ ಜಾರಿ ತಡೆಗೋಡೆಯನ್ನು ಕೆಡವಿ ಸಮೀಪದ ಜನವಸತಿ ಸ್ಥಳದತ್ತ ನುಗ್ಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News