ಪ್ರಿಯಾ ವಾರಿಯರ್ ಚಿತ್ರದ ವಿರುದ್ಧ ಕಾನೂನು ನೋಟಿಸ್ ಜಾರಿಗೊಳಿಸಿದ ಬೋನಿ ಕಪೂರ್

Update: 2019-01-15 10:43 GMT

ಮುಂಬೈ, ಜ.15: ಪ್ರಿಯಾ ಪ್ರಕಾಶ್ ವಾರಿಯರ್ ಇಂಟರ್ನೆಟ್ ಸೆನ್ಸೇಶನ್ ಆಗಿ ವರ್ಷವಾಗುವುದರೊಳಗಾಗಿ  ವಿವಾದಕ್ಕಿಡಾಗಿದ್ದಾರೆ. ಬಾಲಿವುಡ್ ನಲ್ಲಿ ಆಕೆ ನಟಿಸುತ್ತಿರುವ ಚೊಚ್ಚಲ ಚಿತ್ರ ‘ಶ್ರೀದೇವಿ ಬಂಗ್ಲೋ’ ವಿವಾದಕ್ಕೀಡಾಗಿದೆ. ಅದು ಶ್ರೀದೇವಿಯ ಜೀವನವನ್ನು ಅಣಕಿಸುತ್ತಿದೆ ಎಂದು ಆರೋಪಿಸಿ ನಟಿಯ ಪತಿ ಬೋನಿ ಕಪೂರ್ ಚಿತ್ರ ತಂಡಕ್ಕೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.

 ಪ್ರಶಾಂತ್ ಮಾಂಬುಳ್ಳಿ ನಿರ್ದೇಶನದ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಅದರಲ್ಲಿ ನಟಿಯೊಬ್ಬರು ಶೌಚಾಲಯದ ಬಾತ್ ಟಬ್ ನಲ್ಲಿ ಶವವಾಗಿ ಕಾಣಿಸುತ್ತಾರೆ. ನಟಿ ಶ್ರೀದೇವಿ ಕೂಡ ಕಳೆದ ವರ್ಷ ದುಬೈ ಹೋಟೆಲ್ ನ ಸ್ನಾನದ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಚಿತ್ರದಲ್ಲಿ ಪ್ರಿಯಾ ಜೀವನದಲ್ಲಿ ಒಂಟಿಯಾಗಿರುವ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ನನ್ನ ಚಿತ್ರ ಒಂದು ಸಸ್ಪೆನ್ಸ್ ಥ್ರಿಲ್ಲರ್. ಶ್ರೀದೇವಿ ಹೆಸರು ಸಾಮಾನ್ಯ.  ನನ್ನ ಚಿತ್ರದ ನಾಯಕಿ ಕೂಡ ಒಬ್ಬ ನಟಿಯಾಗಿದ್ದಾರೆ ಎಂದು ನಾನು ಅವರಿಗೆ (ಬೋನಿ ಕಪೂರ್) ಹೇಳಿದ್ದೇನೆ. ಕಾನೂನು ನೋಟಿಸನ್ನು ಎದುರಿಸುತ್ತೇವೆ'' ಎಂದು ನಿರ್ದೇಶಕ ಮಾಂಬುಳ್ಳಿ ಹೇಳಿದ್ದಾರೆ.

ಈ ಚಿತ್ರ ಶ್ರೀದೇವಿಯ ಜೀವನಾಧರಿತವೇ ಎಂಬ ಪ್ರಶ್ನೆಗೆ ಉತ್ತರಿಸಲು ಪ್ರಿಯಾ ಕೂಡ ನಿರಾಕರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News