2025ರೊಳಗೆ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳಬೇಕು : ಸರಕಾರಕ್ಕೆ ಗಡುವು ವಿಧಿಸಿದ ಆರೆಸ್ಸೆಸ್

Update: 2019-01-18 09:16 GMT
ಭಯ್ಯಾಜಿ ಜೋಷಿ

ಹೊಸದಿಲ್ಲಿ, ಜ. 18 : ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕೇಂದ್ರ ಸರಕಾರದ ಮೇಲೆ ಸತತ ಒತ್ತಡ ಹೇರುತ್ತಿರುವ ಆರೆಸ್ಸೆಸ್  ಇದೀಗ ರಾಮ ಮಂದಿರ ನಿರ್ಮಾಣ 2025ರೊಳಗೆ ಪೂರ್ಣಗೊಳ್ಳಬೇಕೆಂದು ಗಡುವು ವಿಧಿಸಿದೆ.

''ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ನಮ್ಮ ಆಸೆ. ಅದು 2025ರೊಳಗೆ ಪೂರ್ಣಗೊಳ್ಳಬೇಕು'' ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣವಾದ ನಂತರ ಕನಿಷ್ಠ 150 ವರ್ಷಗಳ ತನಕ ದೇಶ ಕ್ಷಿಪ್ರ ಪ್ರಗತಿ ಕಾಣಲಿದೆಯೆಂಬ ಆತ್ಮವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಆರೆಸ್ಸೆಸ್ ಗಡುವನ್ನು ಮುಂದೂಡುತ್ತಿದೆ ಎಂಬ  ಆರೋಪವನ್ನು ಅವರು ಈ ಸಂದರ್ಭ ನಿರಾಕರಿಸಿದ್ದಾರೆ. ''ಈಗ ನಿರ್ಮಾಣ ಆರಂಭಗೊಂಡರೆ ಮಾತ್ರ ಐದು ವರ್ಷಗಳಲ್ಲಿ ಪೂರ್ಣಗೊಳ್ಳಬಹುದು. ದಿನಾಂಕಗಳನ್ನು ಸರಕಾರ ನಿರ್ಧರಿಸಬೇಕು'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News