ರಾಕೇಶ್ ಅಸ್ತಾನ ಈಗ ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥ

Update: 2019-01-18 12:39 GMT

ಹೊಸದಿಲ್ಲಿ,ಜ.18 :  ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಲವಂತದ ರಜೆಯ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ವಿಶೇಷ  ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನ ಅವರನ್ನು ಸರಕಾರ ಇಂದು ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿದೆ. ಅಸ್ತಾನ ಅವರು ಗುಜರಾತ್ ಕೇಡರ್ ನ 1984 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಅಸ್ತಾನ ಅವರ ಜತೆಗೆ ಸಿಬಿಐನ ಮೂವರು ಉನ್ನತ ಅಧಿಕಾರಿಗಳಾದ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮ, ಡಿಐಜಿ ಮನೀಶ್ ಕುಮಾರ್ ಸಿನ್ಹಾ ಹಾಗೂ ಎಸ್‍ಪಿ ಜಯಂತ್ ಜೆ ನಾಯ್ಕನ್ವಾರೆ ಅವರ ಅಧಿಕಾರಾವಧಿಯನ್ನೂ ಮೊಟಕುಗೊಳಿಸಲಾಗಿದೆ. ಈ ಮೂವರು ಅಧಿಕಾರಿಗಳೂ ಪದಚ್ಯುತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಅವರ ಸಮೀಪವರ್ತಿಗಳೆಂದು ಹೇಳಲಾಗಿದೆ.

ಅವರ ಪೈಕಿ ಶರ್ಮಾ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅಲೋಕ್ ವರ್ಮಾ ಅವರು ಕಳೆದ ವರ್ಷದ ಫೆಬ್ರವರಿಯಲ್ಲಿ  ಸಿಬಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಶರ್ಮಾ ಆವರನ್ನು ಜಂಟಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಅವರು ಅಸ್ತಾನ ವಿರುದ್ಧ ದಾಖಲಾಗಿದ್ದ ಲಂಚ ಪ್ರಕರಣದ ತನಿಖೆಯ ಉಸ್ತುವಾರಿ ಹೊಂದಿದ್ದರು. ಡಿಐಜಿ ಸಿನ್ಹಾ ಕೂಡ ಇದೇ ಪ್ರಕರಣದ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News