ಮೋದಿ ಆಡಳಿತದಲ್ಲಿ ದೇಶದ ಸಾಲದ ಪ್ರಮಾಣ ಶೇ.49ರಷ್ಟು ಏರಿಕೆ

Update: 2019-01-19 07:40 GMT

ಹೊಸದಿಲ್ಲಿ, ಜ.19: ಮೋದಿ ಸರಕಾರದ ಆಡಳಿತಾವಧಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದ ಸಾಲದ ಪ್ರಮಾಣ ಶೇ 49ರಷ್ಟು ಏರಿಕೆಯಾಗಿ 82 ಲಕ್ಷ ಕೋಟಿ ರೂ. ತಲುಪಿದೆ ಎಂದು ಬಿಡುಗಡೆಯಾದ ಸರಕಾರಿ ಸಾಲದ ಸ್ಥಿತಿಗತಿ ಪತ್ರದ 8ನೇ ಆವೃತ್ತಿಯಲ್ಲಿ ಹೇಳಲಾಗಿದೆ.

ಸೆಪ್ಟೆಂಬರ್ 2018ರ ತನಕ ಕೇಂದ್ರ ಸರಕಾರದ ಒಟ್ಟು ಸಾಲದ ಪ್ರಮಾಣ 82,03,253 ಕೋಟಿ ರೂ. ಆಗಿದ್ದರೆ,  ಜೂನ್ 2014ರಲ್ಲಿ ಈ ಪ್ರಮಾಣ ರೂ 54,90,763 ಕೋಟಿಯಾಗಿತ್ತು.

ಈ ಅವಧಿಯಲ್ಲಿ ಸರಕಾರದ ಸಾರ್ವಜನಿಕ ಸಾಲ ಪ್ರಮಾಣ ಶೇ 51.7ರಷ್ಟು ಅಂದರೆ ರೂ 48 ಲಕ್ಷ ಕೋಟಿಯಿಂದ ರೂ 73 ಲಕ್ಷ ಕೋಟಿಗೆ ಏರಿಕೆಯಾಗಿದ್ದರೆ, ಆಂತರಿಕ ಸಾಲದ ಪ್ರಮಾಣ ಶೇ 54ರಷ್ಟು ಏರಿಕೆಯಾಗಿ ರೂ 68 ಲಕ್ಷ ಕೋಟಿ ತಲುಪಿತ್ತು.

ಚಿನ್ನದ ಬಾಂಡ್ ಗಳ ಮೂಲಕ ಪಡೆಯಲಾದ ಸಾಲ ಜೂನ್ 2014ರಲ್ಲಿ ಶೂನ್ಯವಾಗಿದ್ದರೆ ಅದು 2018ರಲ್ಲಿ ರೂ 9,089 ಕೋಟಿಯಷ್ಟಾಗಿತ್ತು. ಸದ್ಯ ದೇಶದ ವಿತ್ತೀಯ ಕೊರತೆ ನವೆಂಬರ್ 2018ರ ತನಕ ರೂ  7.17 ಲಕ್ಷ ಕೋಟಿಯಾಗಿದ್ದು ಇದು ಇಡೀ ವರ್ಷದ ಗುರಿಯಾದ ರೂ 6.24 ಲಕ್ಷ ಕೋಟಿಯ ಶೇ 114.8ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News