ಕೊಹ್ಲಿ ದಾಖಲೆ ಮುರಿದ ಹಾಶಿಮ್ ಅಮ್ಲ

Update: 2019-01-20 05:44 GMT

ಪೋರ್ಟ್ ಎಲಿಝಬೆತ್ , ಜ.20: ದಕ್ಷಿಣ ಆಪ್ರಿಕದ ಆರಂಭಿಕ ದಾಂಡಿಗ ಹಾಶಿಮ್ ಅಮ್ಲ ಅವರು ರವಿವಾರ ಇಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸುವ ಮೂಲಕ ವೇಗವಾಗಿ 27ನೇ ಶತಕ ಪೂರೈಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

ಕೊಹ್ಲಿ  169ನೇ ಏಕದಿನ ಇನಿಂಗ್ಸ್ ಗಳಲ್ಲಿ 27ನೇ ಶತಕ ಪೂರ್ಣಗೊಳಿಸಿದ್ದರು. ಆದರೆ ಅಮ್ಲ ಇದೀಗ 167 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 

ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ದಾಖಲಿಸಿರುವ ಆಟಗಾರರ ಪೈಕಿ ಅಮ್ಲ 5ನೇ ಸ್ಥಾನದಲ್ಲಿದ್ದಾರೆ. ಸಚಿನ್ ತಂಡುಲ್ಕರ್   49,  ವಿರಾಟ್ ಕೊಹ್ಲಿ 39 , ಪಾಂಟಿಂಗ್ 30 ಮತ್ತು ಜಯ ಸೂರ್ಯ 28 , ಅಮ್ಲ 27 ಏಕದಿನ ಶತಕಗಳನ್ನು ದಾಖಲಿಸಿದ್ದಾರೆ 

ಅಮ್ಲ  120 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಔಟಾಗದೆ 108 ರನ್ ಗಳಿಸಿದ್ದರು. ಇವರ ಶತಕ ನೆರವಿನಲ್ಲಿ ಆಫ್ರಿಕ ನಿಗದಿತ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿದ್ದರು. ಆದರೆ  ಅವರ ಶತಕ ವ್ಯರ್ಥಗೊಂಡಿತು. ಪಾಕಿಸ್ತಾನ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 267 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವೇಗವಾಗಿ 27  ಶತಕಗಳನ್ನು ಪೂರ್ಣಗೊಳಿಸಿದ ದಾಂಡಿಗರು

167: ಹಾಶೀಮ್ ಅಮ್ಲ( ದ. ಆಫ್ರಿಕ)

169:  ವಿರಾಟ್ ಕೊಹ್ಲಿ(ಭಾರತ)

254: ಸಚಿನ್ ತೆಂಡುಲ್ಕರ್ (ಭಾರತ)

308: ರಿಕಿ ಪಾಂಟಿಂಗ್ (ಆಸ್ಟ್ರೇಲಿಯ)

404:  ಸನತ್ ಜಯಸೂರ್ಯ (ಶ್ರೀಲಂಕಾ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News