ಇವಿಎಂ ಹ್ಯಾಕ್ ಮಾಡಲು ಕಡಿಮೆ ಫ್ರಿಕ್ವೆನ್ಸಿ ಸಿಗ್ನಲ್ ನೀಡಿದ್ದ ರಿಲಯನ್ಸ್

Update: 2019-01-21 17:34 GMT

#“ಹ್ಯಾಕಿಂಗ್ ತಡೆದ ಕಾರಣ ಛತ್ತೀಸ್ ಗಢ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿಗೆ ಸೋಲು”

ಲಂಡನ್, ಜ.21: ಚುನಾವಣೆಗಳ ಸಂದರ್ಭ ಇವಿಎಂಗಳನ್ನು ಹ್ಯಾಕ್ ಮಾಡಲು ಬಿಜೆಪಿ ಐಟಿ ಸೆಲ್ ಗೆ ಕಡಿಮೆ ಫ್ರಿಕ್ವೆನ್ಸಿಯ ಸಿಗ್ನಲ್ ಗಳನ್ನು ಪೂರೈಸುವ ಮೂಲಕ ರಿಲಾಯನ್ಸ್ ನೆರವಾಗಿತ್ತು ಎಂದು ಅಮೆರಿಕ ಮೂಲದ ಹ್ಯಾಕರ್ ಸೈಯದ್ ಶುಜಾ ಆರೋಪಿಸಿದ್ದಾರೆ.

ಲಂಡನ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಾಟಾವನ್ನು ಕಳುಹಿಸಲು ರಿಲಾಯನ್ಸ್ ಜಿಯೋ ಬಳಿ ನೆಟ್ ವರ್ಕ್ ಇದೆ. ಬಿಜೆಪಿ ಇದರ ಲಾಭ ಪಡೆಯುತ್ತಿದೆ. ಭಾರತದಲ್ಲಿ ಈ ಸೌಲಭ್ಯ ಸಿಗುವ 9 ಪ್ರದೇಶಗಳಿವೆ. ಇವಿಎಂಗಳನ್ನು ನಾವು ತಿರುಚುತ್ತಿದ್ದೇವೆ ಎಂಬ ಅರಿವೇ ಉದ್ಯೋಗಿಗಳಿಗೆ ಇರುವುದಿಲ್ಲ. ನಾವು ಡಾಟಾ ಎಂಟ್ರಿ ಮಾಡುತ್ತಿದ್ದೇವೆ ಎಂದಷ್ಟೇ ಅವರು ಭಾವಿಸುತ್ತಾರೆ” ಎಂದು ಶುಜಾ ಆರೋಪಿಸಿದರು.

“ಛತ್ತೀಸ್ ಗಢ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ನಮ್ಮ ತಂಡ ಬಿಜೆಪಿಯ ಹ್ಯಾಕಿಂಗ್ ಪ್ರಯತ್ನಗಳನ್ನು ತಡೆಯದಿದ್ದರೆ ಅಲ್ಲೂ ಬಿಜೆಪಿ ಜಯ ಗಳಿಸುತ್ತಿತ್ತು” ಎಂದವರು ಆರೋಪಿಸಿದರು.

ಕನ್ನ ಹಾಕಲಾಗದ ಯಂತ್ರವನ್ನೂ ಬಿಜೆಪಿ ಹೊಂದಿದೆ

ಚುನಾವಣೆಗಳಲ್ಲಿ ಬಳಸಲಾಗುವ ಮತಯಂತ್ರಗಳನ್ನೇ ಹೋಲುವ ಇನ್ನೊಂದು ಮಾದರಿಯ ಮತಯಂತ್ರವನ್ನು ಬಿಜೆಪಿ ಹೊಂದಿದೆ ಎಂದು ಅವರು ಹೇಳಿಕೊಂಡರು.

 ‘‘ಮತಯಂತ್ರಕ್ಕೆ ಕನ್ನ ಹಾಕಲಾಗಿದೆ ಎಂಬ ಆರೋಪಗಳು ಬರುವಾಗಲೆಲ್ಲ, ಅವರು ಈ ಯಂತ್ರವನ್ನು ತೋರಿಸುತ್ತಾರೆ. ಅದಕ್ಕೆ ಕನ್ನ ಹಾಕಲು ನಮಗೂ ಸಾಧ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News