ಜಾಗತಿಕವಾಗಿ ಫಾರ್ವರ್ಡ್ ಮೆಸೇಜ್ ಮಿತಿ 5ಕ್ಕೆ ಇಳಿಸಿದ ವ್ಯಾಟ್ಸ್‌ಆ್ಯಪ್

Update: 2019-01-21 16:33 GMT

ಹೊಸದಿಲ್ಲಿ, ಜ. 21: ತಪ್ಪು ಮಾಹಿತಿ ಹಾಗೂ ವದಂತಿ ವಿರುದ್ಧ ಹೋರಾಡಲು ಫೇಸ್‌ಬುಕ್ ಇಂಕ್‌ನ ಸಂದೇಶ ರವಾನೆ ಸೇವೆಯಾದ ವ್ಯಾಟ್ಸ್ ಆ್ಯಪ್‌ನಲ್ಲಿ ಮೆಸೇಜ್ ಫಾರ್ವರ್ಡ್ ಅನ್ನು ಜಾಗತಿಕವಾಗಿ ಐದಕ್ಕೆ ಮಿತಿಗೊಳಿಸಲಾಗಿದೆ ಎಂದು ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಸೋಮವಾರ ಹೇಳಿದ್ದಾರೆ.

ವ್ಯಾಟ್ಸ್ ಆ್ಯಪ್‌ನಲ್ಲಿ ಮೆಸೇಜ್ ಫಾರ್ವರ್ಡ್ ಅನ್ನು ಜಗತ್ತಿನಾದ್ಯಂತ ಸೋಮವಾರದಿಂದ ಐದಕ್ಕೆ ಮಿತಿಗೊಳಿಸಿದ್ದೇವೆ ಎಂದು ವ್ಯಾಟ್ಸ್ ಆ್ಯಪ್‌ನ ನೀತಿ ಹಾಗೂ ಸಂವಹನದ ಅಧ್ಯಕ್ಷ ವಿಕ್ಟೋರಿಯಾ ಗ್ರಾಂಡ್ ಇಂಡೋನೇಶ್ಯದ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಈ ಹಿಂದೆ ವ್ಯಾಟ್ಸ್ ಆ್ಯಪ್ ಬಳಕೆದಾರರು ಮೆಸೇಜ್ ಅನ್ನು 20 ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಫಾರ್ವರ್ಡ್ ಮಾಡಬಹುದಿತ್ತು. ಸಂದೇಶವನ್ನು ಐವರಿಗೆ ಮಾತ್ರ ಫಾರ್ವರ್ಡ್ ಮಾಡುವ ಮಿತಿಯನ್ನು ಭಾರತದಲ್ಲಿ ಜುಲೈಯಲ್ಲಿ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News