ಶುದ್ಧೀಕರಣ ಶಾಸ್ತ್ರ: ವಿವರಣೆ ನೀಡಲು ಅರ್ಚಕರಿಗೆ ಎರಡು ವಾರಗಳ ಗಡುವು

Update: 2019-01-21 16:48 GMT

ತಿರುವನಂತಪುರಂ,ಜ.21: ಐವತ್ತಕ್ಕಿಂತ ಕೆಳಗಿನ ಹರೆಯದ ಮಹಿಳೆಯರು ದೇಗುಲ ಪ್ರವೇಶಿಸಿದ ನಂತರ ಹಮ್ಮಿಕೊಳ್ಳಲಾದ ಶುದ್ಧೀಕರಣ ಪ್ರಕ್ರಿಯೆಗೆ ವಿವರಣೆ ನೀಡುವಂತೆ ಕೇರಳದ ಅತ್ಯುನ್ನತ ದೇಗುಲ ಮಂಡಳಿಯಾದ ಟ್ರಾವಂಕೊರ್ ದೇವಸ್ವೊಂ ಮಂಡಳಿ (ಟಿಡಿಬಿ) ಶಬರಿಮಲೆ ಅಯ್ಯಪ್ಪ ದೇಗುಲದ ಪ್ರಧಾನ ಅರ್ಚಕರಿಗೆ ನೀಡಿದ್ದ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಿದೆ.

ಎರಡು ತಿಂಗಳ ಪೂಜಾ ಅವಧಿ ಮುಗಿದು ದೇಗುಲದ ಬಾಗಿಲು ಮುಚ್ಚಿದ ಮರುದಿನ ಮಂಡಳಿ ಆ ಆದೇಶ ಜಾರಿ ಮಾಡಿದೆ. ದೇಗುಲದ ಪ್ರಧಾನ ಅರ್ಚಕರಾದ ಕಂಡರರು ರಾಜೀವರು ಎರಡು ತಿಂಗಳ ಕಾಲ ಪೂಜಾ ವಿಧಿವಿಧಾನಗಳಲ್ಲಿ ವ್ಯಸ್ತವಾಗಿದ್ದರು. ಹಾಗಾಗಿ ಅವರಿಗೆ ವಿವರಣೆ ನೀಡಲು ಎರಡು ವಾರಗಳ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ತಿಳಿಸಿದ್ದಾರೆ. ಶಬರಿಮಲೆ ದೇಗುಲಕ್ಕೆ ಜನವರಿ 2ರಂದು 42ರ ಹರೆಯದ ಬಿಂದು ಮತ್ತು 44ರ ಹರೆಯದ ಕನಕದುರ್ಗಾ ಪ್ರವೇಶ ಪಡೆದ ನಂತರ ಪ್ರಧಾನ ಅರ್ಚಕರ ಆದೇಶದಂತೆ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಶುದ್ಧೀಕರಣ ಶಸ್ತ್ರ ನಡೆಸಲಾಗಿತ್ತು. ಅರ್ಚಕರ ಈ ಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವಾರು ಮಂದಿ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News