ಬಡವರು, ಶ್ರೀಮಂತರ ನಡುವೆ ಹೆಚ್ಚುತ್ತಿರುವ ಅಂತರ: ‘ಓಕ್ಸ್‌ಫಾಮ್ ಇಂಟರ್‌ನ್ಯಾಶನಲ್’ ವರದಿ

Update: 2019-01-21 17:09 GMT

ನೈರೋಬಿ, ಜ. 21: ಬಡವರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುವ ತೆರಿಗೆ ವ್ಯವಸ್ಥೆಗಳು ಸಾರ್ವಜನಿಕ ಸೇವೆಗಳಿಗೆ ಕಡಿಮೆ ಹಣವನ್ನು ಒದಗಿಸುತ್ತವೆ ಹಾಗೂ ಅವುಗಳು ಬಡವರು ಮತ್ತು ಶ್ರೀಮಂತರ ಅಂತರವನ್ನು ಹಿಗ್ಗಿಸುತ್ತವೆ ಎಂದು ‘ಓಕ್ಸ್‌ಫಾಮ್ ಇಂಟರ್‌ನ್ಯಾಶನಲ್’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ವಿನ್ನೀ ಬ್ಯಾನ್ಯಿಮ ಹೇಳಿದ್ದಾರೆ.

ಕಳೆದ ವರ್ಷ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಬಡವರ ಸಂಪತ್ತಿನಲ್ಲಿ 11 ಶೇಕಡ ಕುಸಿತ ಸಂಭವಿಸಿದಾಗ, ಪ್ರತಿ ಎರಡು ದಿನಗಳಿಗೊಮ್ಮೆ ಓರ್ವ ಹೊಸ ಬಿಲಿಯಾಧೀಶ ಉದಯಿಸಿರುವುದನ್ನು ನಾವು ನೋಡಿದ್ದೇವೆ ಎಂದು ಕೆನ್ಯ ರಾಜಧಾನಿ ನೈರೋಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ದತ್ತಿ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಹೇಳಿದೆ.

ಸರಕಾರಗಳು ಸಾರ್ವಜನಿಕ ಸೇವೆಗಳಿಗಾಗಿ ಹಣ ಬಿಡುಗಡೆ ಮಾಡುವುದನ್ನು ನಿರಂತರವಾಗಿ ಕಡಿತಗೊಳಿಸುತ್ತಿವೆ ಹಾಗೂ ತೆರಿಗೆ ತಪ್ಪಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾಗುತ್ತಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

 ಸ್ವಿಟ್ಸರ್‌ಲ್ಯಾಂಡ್‌ನ ಡ್ಯಾವಸ್‌ನಲ್ಲಿ ಜಾಗತಿಕ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶ ಆರಂಭಗೊಂಡಿರುವಂತೆಯೇ, ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News