ರಾಜ್ಯ ಜಿಡಿಪಿ ಏರಿಕೆಯಲ್ಲಿ ಗರಿಷ್ಠ ಸಾಧನೆ ಈ ರಾಜ್ಯದ್ದು

Update: 2019-01-22 05:24 GMT

ಹೊಸದಿಲ್ಲಿ, ಜ. 22: ಕಳೆದ ಹಣಕಾಸು ವರ್ಷದಲ್ಲಿ ಗರಿಷ್ಠ ರಾಜ್ಯ ಜಿಡಿಪಿ ದಾಖಲಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ. ದೇಶದ 17 ರಾಜ್ಯಗಳು ಶೇಕಡ 11.3ರಷ್ಟು ಪ್ರಗತಿ ದಾಖಲಿಸಿದ್ದು, ಆಂಧ್ರಪ್ರದೇಶ ಹಾಗೂ ಗುಜರಾತ್ ನಂತರದ ಸ್ಥಾನಗಳಲ್ಲಿವೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್‌ನ ವರದಿ ಬಹಿರಂಗಪಡಿಸಿದೆ.

ಪ್ರಗತಿ, ಹಣದುಬ್ಬರ ಮತ್ತು ವಿತ್ತೀಯ ಕೊರತೆಯ ಆಧಾರದಲ್ಲಿ ನೀಡಿರುವ ರ್ಯಾಂಕಿಂಗ್‌ನಲ್ಲಿ ಗುಜರಾತ್ ಹಾಗೂ ಕರ್ನಾಟಕ ಅಗ್ರ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಜಾರ್ಖಂಡ್, ಕೇರಳ ಹಾಗೂ ಪಂಜಾಬ್ ಪ್ರಗತಿಯ ಕೋಷ್ಟಕದಲ್ಲಿ ಕೊನೆಯ ಮೂರು ಸ್ಥಾನಗಳಲ್ಲಿವೆ.

ದೇಶದಲ್ಲಿ ವಿಶೇಷ ಸ್ಥಾನಮಾನ ಇಲ್ಲದ ಒಟ್ಟು 17 ರಾಜ್ಯಗಳಿಗೆ ರ್ಯಾಂಕಿಂಗ್ ನೀಡಲಾಗಿದ್ದು, ವಿವಿಧ ಮಾನದಂಡಗಳಡಿ ಕೇಂದ್ರೀಯ ಅಂಕಿ ಅಂಶಗಳ ಕಚೇರಿಯಿಂದ ಪಡೆದ ಮಾಹಿತಿಗಳ ಆಧಾರದಲ್ಲಿ ರ್ಯಾಂಕಿಂಗ್ ನೀಡಲಾಗಿದೆ. ಗೋವಾ ಅತಿಚಿಕ್ಕ ರಾಜ್ಯ ಕಾರಣ ಎಂಬ ಕಾರಣಕ್ಕಾಗಿ ರ್ಯಾಂಕಿಂಗ್‌ನಿಂದ ಕೈಬಿಡಲಾಗಿದೆ.

ಹಿಂದಿನ ವರ್ಷ ಶೇಕಡ 4.8ರಷ್ಟು ಪ್ರಗತಿ ದಾಖಲಿಸಿದ್ದ ಪಶ್ಚಿಮ ಬಂಗಾಳ 2018ನೇ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ಶೇಕಡ 9.1ರಷ್ಟು ಪ್ರಗತಿಯೊಂದಿಗೆ ಅಗ್ರ ಮೂರು ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ. ಇಲ್ಲಿ ಹಿಂದಿನ ಹಣಕಾಸು ವರ್ಷದಲ್ಲಿ ಶೇಕಡ 7ರಷ್ಟಿದ್ದ ಹಣದುಬ್ಬರ ಋಣಾತ್ಮಕ ಶೇಕಡ 4ಕ್ಕೆ ಇಳಿದಿದೆ. ವಿತ್ತೀಯ ಕೊರತೆ ಶೇಕಡ 3ರಿಂದ 2.4ಕ್ಕೆ ಇಳಿದಿದೆ.

ದೇಶದಲ್ಲಿ ಜಿಡಿಪಿ ಪ್ರಗತಿ ವೇಗ ಕುಂಠಿತವಾಗಿದ್ದರೂ, ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ, 17 ರಾಜ್ಯಗಳ ಪೈಕಿ 12 ರಾಜ್ಯಗಳು ಹೆಚ್ಚಿನ ಪ್ರಗತಿ ದಾಖಲಿಸಿವೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News