ರಶ್ಯದೊಂದಿಗೆ ನಿರಂತರ ಸಂಪರ್ಕ: ರವೀಶ್ ಕುಮಾರ್

Update: 2019-01-22 16:13 GMT

ಹೊಸದಿಲ್ಲಿ, ಜ.22: ಕಪ್ಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಎರಡು ಹಡಗುಗಳಲ್ಲಿ ಕಿರ್ಚ್ ಜಲಸಂಧಿಯ ಬಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯರ ಸಹಿತ ಕನಿಷ್ಟ 11 ಮಂದಿ ಮೃತಪಟ್ಟಿರುವ ಪ್ರಕರಣದಲ್ಲಿ ರಶ್ಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟಿರುವ ಅಥವಾ ಬಾಧಿತರಾದ ಭಾರತೀಯ ನಾಗರಿಕರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯವರು ರಶ್ಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಟಾಂಝಾನಿಯಕ್ಕೆ ಸೇರಿದ ಎರಡು ಹಡಗುಗಳಲ್ಲಿ ಕಿರ್ಚ್ ಜಲಸಂಧಿಯ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ 32 ಸಿಬ್ಬಂದಿಗಳಿದ್ದು ಇವರು ಟರ್ಕಿ ಹಾಗೂ ಭಾರತದ ಪ್ರಜೆಗಳು ಎಂದು ಪ್ರಾಥಮಿಕ ಮಾಹಿತಿ ದೊರೆತಿರುವುದಾಗಿ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News