ಪಾಕ್: ಶರೀಫ್ ಜೈಲಿನಿಂದ ಆಸ್ಪತ್ರೆಗೆ ದಾಖಲು

Update: 2019-01-22 17:29 GMT

ಲಾಹೋರ್, ಜ. 22: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಲಾಹೋರ್ ಜೈಲಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಮಂಗಳವಾರ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

69 ವರ್ಷದ ಶರೀಫ್‌ರನ್ನು ಕೋಟ್ ಲಾಖ್‌ಪತ್ ಜೈಲಿನಿಂದ ಭಾರೀ ಭದ್ರತೆಯೊಂದಿಗೆ ಪಂಜಾಬ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

 ಕಳೆದ ವಾರ ಜೈಲಿನಲ್ಲಿ ಶರೀಫ್‌ರನ್ನು ತಪಾಸಣೆಗೈದ ವಿಶೇಷ ವೈದ್ಯಕೀಯ ಮಂಡಳಿಯೊಂದು, ‘‘ಅವರು ಸಂಪೂರ್ಣವಾಗಿ ಕ್ಷೇಮವಾಗಿಲ್ಲ’’ ಎಂದು ಹೇಳಿತ್ತು. ಅವರಿಗೆ ಚಿಕಿತ್ಸೆಗೆ ಶಿಫಾರಸು ಮಾಡುವ ಮುನ್ನ ಹೆಚ್ಚಿನ ಪರೀಕ್ಷೆಗಳು ಅಗತ್ಯ ಎಂಬುದಾಗಿಯೂ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News