2017-18ರಲ್ಲಿ ಬಿಜೆಪಿಗೆ ಅಪರಿಚಿತ ಮೂಲದಿಂದ 553 ಕೋಟಿ ರೂ. ದೇಣಿಗೆ

Update: 2019-01-23 15:39 GMT

ಹೊಸದಿಲ್ಲಿ, ಜ.23: 2017-18ರಲ್ಲಿ ಆಡಳಿತ ಪಕ್ಷ ಬಿಜೆಪಿ ಅಪರಿಚಿತ ಮೂಲಗಳಿಂದ 553 ಕೋಟಿ ರೂ. ಆದಾಯ ಗಳಿಸಿದೆ ಎಂದು ಚುನಾವಣಾ ಕಾವಲುಸಂಸ್ಥೆ ಪ್ರಜಾಸತಾತ್ಮಕ ಸುಧಾರಣೆಗಳ ಸಂಘಟನೆ (ಎಡಿಆರ್)ಯ ವರದಿ ತಿಳಿಸಿದೆ. ಈ ಮೊತ್ತವು ಇತರ ಐದು ರಾಷ್ಟ್ರೀಯ ಪಕ್ಷಗಳು ಘೋಷಿಸಿರುವ ಒಟ್ಟಾರೆ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳು ಒಟ್ಟಾರೆ 689.44 ಕೋಟಿ ರೂ. ಆದಾಯ ಅಪರಿಚಿತ ಮೂಲಗಳಿಂದ ಬಂದಿದೆ ಎಂದು ತಿಳಿಸಿವೆ. ಈ ಪೈಕಿ ಬಿಜೆಪಿಯ ಪಾಲು 553.38ಕೋಟಿ ರೂ. ಆಗಿದೆ ಎಂದು ಬುಧವಾರ ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಲಾಗಿದೆ. ಅಪರಿಚಿತ ಮೂಲಗಳೆಂದರೆ, ಐಟಿ ರಿಟರ್ನ್ಸ್‌ನಲ್ಲಿ ಆದಾಯವನ್ನು ಘೋಷಿಸಿರುವ ಆದರೆ 20,000ರೂ.ಗೂ ಕೆಳಗಿನ ದೇಣಿಗೆಯಲ್ಲಿ ಮೂಲವನ್ನು ತಿಳಿಸದ ಆದಾಯವಾಗಿದೆ. ಇಂಥ ಅಪರಿಚಿತ ಮೂಲಗಳಲ್ಲಿ, ಚುನಾವಣಾ ಬಾಂಡ್‌ಗಳು, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ಇತರೆ ಆದಾಯ, ಸ್ವಯಂ ದೇಣಿಗೆ, ಸಭೆ/ಮೋರ್ಚಾಗಳಿಂದ ದೇಣಿಗೆ ಇತ್ಯಾದಿಗಳು ಒಳಗೊಂಡಿವೆ. ಈ ರೀತಿ ದೇಣಿಗೆ ನೀಡುವವರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News