×
Ad

ಗೋಮತಿ ನದಿತೀರ ಅಭಿವೃದ್ಧಿ ಯೋಜನೆ: ಪಿಎಂಎಲ್‌ಎ ಪ್ರಕರಣಕ್ಕೆ ಸಂಬಂಧಿಸಿ ಹಲವು ರಾಜ್ಯಗಳಲ್ಲಿ ಇಡಿ ದಾಳಿ

Update: 2019-01-24 21:15 IST

ಲಕ್ನೋ/ದಿಲ್ಲಿ,ಜ.24: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 1,500 ಕೋ.ರೂ.ಗಳ ಗೋಮತಿ ನದಿತೀರ ಅಭಿವೃದ್ಧಿ ಯೋಜನೆಯಲ್ಲಿ ಅಕ್ರಮ ಹಣ ವಹಿವಾಟು ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಗುರುವಾರ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

ಉತ್ತರ ಪ್ರದೇಶ,ದಿಲ್ಲಿ,ಹರ್ಯಾಣ ಮತ್ತು ರಾಜಸ್ಥಾನಗಳಲ್ಲಿ ಆರೋಪಿಗಳು ಮತ್ತು ಅವರ ಸಹವರ್ತಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

ಪ್ರಕರಣದಲ್ಲಿ ಸಿಬಿಐ ಮೊದಲು ಎಫ್‌ಐಆರ್ ದಾಖಲಿಸಿದ್ದು,ಕಳೆದ ವರ್ಷದ ಮಾರ್ಚ್‌ನಲ್ಲಿ ಇಡಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಉತ್ತರ ಪ್ರದೇಶದ ಹಿಂದಿನ ಎಸ್‌ಪಿ ಸರಕಾರವು ಗೋಮತಿ ನದಿತೀರ ಸುಂದರೀಕರಣದ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಯೋಗಿ ಆದಿತ್ಯನಾಥ ನೇತೃತ್ವದ ಹಾಲಿ ಬಿಜೆೆಪಿ ಸರಕಾರವು ಯೋಜನೆಯ ಕುರಿತು ತನಿಖೆಗೆ ಆದೇಶಿಸಿದ ಬಳಿಕ ಸಿಬಿಐ ತನಿಖೆಯನ್ನು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News