ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿದ ನ್ಯೂಝಿಲೆಂಡ್ ಪೊಲೀಸ್ ಇಲಾಖೆ!

Update: 2019-01-27 12:17 GMT

ವೆಲ್ಲಿಂಗ್ಟನ್, ಜ.27: ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಅದರದೇ ನೆಲದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಕಳೆದ ಕೆಲವು ತಿಂಗಳಿಂದ ಅದ್ಭುತ ಕ್ರಿಕೆಟ್ ಆಡುತ್ತಿರುವ ಭಾರತೀಯರ ದಾಳಿಯನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಿದೆ. ವಿರಾಟ್ ಕೊಹ್ಲಿ ಪಡೆ ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆತಿಥೇಯರು ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಟೀಮ್ ಇಂಡಿಯಾ ಪ್ರಾಬಲ್ಯ ಸಾಧಿಸುತ್ತಿರುವನ್ನು ನೋಡುತ್ತಿರುವ ನ್ಯೂಝಿಲೆಂಡ್ ಪೊಲೀಸ್ ಇಲಾಖೆ ಫೇಸ್‌ಬುಕ್ ಮೂಲಕ ಮನರಂಜನೀಯ ಪೋಸ್ಟ್ ಹಾಕಿದೆ. ಅಪಾಯಕಾರಿ ಗುಂಪೊಂದು ದೇಶದಲ್ಲಿ ಪ್ರವಾಸ ಕೈಗೊಂಡಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

‘‘ ಈಗ ನಮ್ಮ ದೇಶಕ್ಕೆ ಅಪಾಯಕಾರಿ ಗುಂಪು ಪ್ರವಾಸಕೈಗೊಂಡಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಪೊಲೀಸ್ ಬಯಸಿದೆ. ದೇಶದಲ್ಲಿ ಪ್ರವಾಸ ಕೈಗೊಂಡಿರುವ ಗುಂಪು ನೇಪಿಯರ್ ಹಾಗೂ ವೌಂಟ್ ವೌಂಗನೂಯಿನಲ್ಲಿ ಅಮಾಯಕರಂತೆ ಕಾಣುವ ನ್ಯೂಝಿಲೆಂಡ್ ಮೇಲೆ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿ ವರದಿಯಲ್ಲಿ ಕಂಡುಬಂದಿದೆ. ಸಾರ್ವಜನಿಕರು ಕ್ರಿಕೆಟ್ ಚೆಂಡು ಅಥವಾ ಬ್ಯಾಟನ್ನು ಕ್ರಿಕೆಟ್ ಮೈದಾನದೊಳಗೆ ಕೊಂಡೊಯ್ಯುವಾಗ ಇನ್ನಷ್ಟು ಎಚ್ಚರಿಕೆಯಿಂದಿರಬೇಕು’’ ಎಂದು ಈಸ್ಟರ್ನ್ ಡಿಸ್ಟ್ರಿಕ್ಟ್ ಪೊಲೀಸ್ ಫೇಸ್‌ಬುಕ್‌ನಲ್ಲಿ ಬರೆದಿದೆ.

ಈ ವ್ಯಂಗ್ಯಭರಿತ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ತೆಗೆದು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನ್ಯೂಝಿಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್,‘‘ತುಂಬಾ ದಕ್ಷ’’ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News