×
Ad

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯದ ಭದ್ರತೆ

Update: 2019-01-28 20:59 IST

ಹೊಸದಿಲ್ಲಿ,ಜ.28: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಬಡವರಿಗೆ ನಿಶ್ಚಿತ ಕನಿಷ್ಟ ಆದಾಯವನ್ನು ನೀಡುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ.

ಛತ್ತೀಸ್‌ಗಡದ ರಾಯ್‌ಪುರದಲ್ಲಿ ಕಿಸಾನ್ ಆಭಾರ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಗಾಂಧಿ ಈ ಭರವಸೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಕಾಂಗ್ರೆಸ್ ನೇತೃತ್ವದ ಸರಕಾರವು ಕನಿಷ್ಟ ಆದಾಯದ ಭರವಸೆಯನ್ನು ನೀಡಲಿದೆ. ಇದರರ್ಥ ಭಾರತದ ಪ್ರತಿ ಬಡವನಿಗೂ ನಿಶ್ಚಿತ ಕನಿಷ್ಟ ಆದಾಯ ದೊರೆಯಲಿದೆ. ಅಂದರೆ ದೇಶದಲ್ಲಿ ಹಸಿವು, ಬಡತನ ಇರುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ಯೋಜನೆಯನ್ನು ನಮ್ಮ ಸರಕಾರ ಛತ್ತೀಸ್‌ಗಡ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಜಾರಿಗೆ ತರಲಿದೆ. ನಮಗೆ ಎರಡು ಭಾರತ ಬೇಕಿಲ್ಲ, ಒಂದೇ ಭಾರತ ಬೇಕು ಎಂದು ಅವರು ತಿಳಿಸಿದ್ದಾರೆ. ಯೋಜನೆಯ ಕುರಿತು ಮಾತನಾಡಿದ ಮಾಜಿ ವಿತ್ತ ಸಚಿವ ಪಿ.ಚಿದಂಬರಮ್, ಎಲ್ಲರಿಗೂ ಕನಿಷ್ಟ ಆದಾಯ ತತ್ವವನ್ನು ಕಳೆದ ಎರಡು ವರ್ಷಗಳಿಂದ ಚರ್ಚಿಸಲಾಗುತ್ತಿತ್ತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಈ ಯೋಜನೆಯ ವಿವರ ನೀಡಲಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯೊಂದಿಗೆ ನಾವು ಯುಪಿಎ ಸರಕಾರದ ಪ್ರತಿಯೊಬ್ಬನಿಗೆ ನೂರು ದಿನಗಳ ಉದ್ಯೋಗದ ಭರವಸೆ ನೀಡುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೆಗಾವನ್ನು ಮುಂದಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News