ದಾಖಲೆ ಸಂಖ್ಯೆಯ ಜನರು ವೀಕ್ಷಿಸಿದ ಕಮಲಾ ಹ್ಯಾರಿಸ್ ಕಾರ್ಯಕ್ರಮ

Update: 2019-01-30 17:23 GMT

ವಾಶಿಂಗ್ಟನ್, ಜ. 30: ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಭಾರತ ಮೂಲದ ಕಮಲಾ ಹ್ಯಾರಿಸ್ ಅವರ ‘ಸಿಎನ್‌ಎನ್ ಟೌನ್‌ಹಾಲ್’ ಕಾರ್ಯಕ್ರಮವನ್ನು ಸರಾಸರಿ 19.57 ಲಕ್ಷ ಮಂದಿ ವೀಕ್ಷಿಸಿದ್ದು ದಾಖಲೆಯಾಗಿದೆ.

ಇತರ ಅಭ್ಯರ್ಥಿಗಳೊಂದಿಗೆ ಸಿಎನ್‌ಎನ್ ಟಿವಿ ಜಾಲ ನಡೆಸಿದ ಇಂಥದೇ ಕಾರ್ಯಕ್ರಮಗಳಿಗೆ ಹೋಲಿಸಿದರೆ, ಕಮಲಾ ಕಾರ್ಯಕ್ರಮದಲ್ಲಿ ಸಿಎನ್‌ಎನ್ ಗರಿಷ್ಠ ರೇಟಿಂಗ್ ಸಂಪಾದಿಸಿದೆ.

2016ರಲ್ಲಿ ಸೆನೆಟ್‌ಗೆ ಆಯ್ಕೆಯಾಗಿರುವ 54 ವರ್ಷದ ಕಮಲಾ, ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಕಳೆದ ವಾರ ಘೋಷಿಸಿದ್ದಾರೆ.

ಸೋಮವಾರ ರಾತ್ರಿ ಪ್ರಸಾರವಾದ ‘ಸಿಎನ್‌ಎನ್ ಟೌನ್‌ಹಾಲ್’ ಕಾರ್ಯಕ್ರಮವು ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಕೇಬಲ್ ನ್ಯೂಸ್ ಏಕ ಅಭ್ಯರ್ಥಿ ಚುನಾವಣಾ ಟೌನ್‌ಹಾಲ್ ಆಗಿತ್ತು ಎಂದು ಹೇಳಿಕೆಯೊಂದರಲ್ಲಿ ಸಿಎನ್‌ಎನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News