ಅನಂತನಾಗ್: ಗ್ರೆನೇಡ್ ಎಸೆದ ಉಗ್ರರು; ಮೂವರು ಮಹಿಳೆಯರ ಸಹಿತ 7 ಮಂದಿಗೆ ಗಾಯ

Update: 2019-01-31 14:59 GMT

ಶ್ರೀನಗರ, ಜ.31: ಜಮ್ಮು ಕಾಶ್ಮಿರದ ಅನಂತನಾಗ್ ಜಿಲ್ಲೆಯಲ್ಲಿ ಗುರುವಾರ ಭಯೋತ್ಪಾದಕರು ಭದ್ರತಾ ಪಡೆಗಳತ್ತ ಗ್ರೆನೇಡ್ ಎಸೆದಿದ್ದು ಮೂವರು ಮಹಿಳೆಯರು, ಇಬ್ಬರು ಸಿಆರ್‌ಪಿಎಫ್ ಯೋಧರ ಸಹಿತ 7 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತನಾಗ್ ಜಿಲ್ಲೆಯ ಶೇರ್‌ಭಾಗ್ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಭದ್ರತಾ ಪಡೆಗಳತ್ತ ಉಗ್ರರು ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ. ಗ್ರೆನೇಡ್ ಸ್ಫೋಟದಿಂದ ಮೂವರು ಮಹಿಳೆಯರು, ಇಬ್ಬರು ಯೋಧರ ಸಹಿತ 7 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯೋತ್ಪಾದಕರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದಿರುವ ಎರಡನೇ ಗ್ರೆನೇಡ್ ದಾಳಿ ಪ್ರಕರಣ ಇದಾಗಿದೆ. ಬುಧವಾರ ಕುಲ್‌ಗಾಂವ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ನಡೆದ ಉಗ್ರರ ಗ್ರೆನೇಡ್ ದಾಳಿಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News