×
Ad

ಸುಪ್ರೀಂ ಆದೇಶ ಬಾಕಿಯಿದ್ದರೂ ಪುಣೆ ಜೈಲಿನಿಂದ ಸುರೇಂದ್ರ ಗಡ್ಲಿಂಗ್,ವರವರ ರಾವ್ ವರ್ಗಾವಣೆ

Update: 2019-01-31 21:54 IST

ಮಂಬೈ,ಜ.31: ಭೀಮಾ-ಕೋರೆಗಾಂವ್ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿದ್ದರೂ ವಿಶೇಷ ನ್ಯಾಯಾಲಯವೊಂದು ವರ್ಗಾವಣೆ ವಾರಂಟ್‌ಗೆ ಒಪ್ಪಿಗೆ ನೀಡಿದ ಬಳಿಕ ವಕೀಲ ಸುರೇಂದ್ರ ಗಡ್ಲಿಂಗ್ ಮತ್ತು ಕವಿ ವರವರ ರಾವ್ ಅವರನ್ನು ಬುಧವಾರ ಪುಣೆಯ ಯೆರವಾಡಾ ಜೈಲಿನಿಂದ ಗಡಶಿರೋಳಿ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಲಾಗಿದೆ.

 2017,ಡಿ.31ರಂದು ಪುಣೆಯಲ್ಲಿ ಸಮ್ಮೇಳನವೊಂದನ್ನು ಆಯೋಜಿಸಲು ಮಾವೋವಾದಿಗಳೊಂದಿಗೆ ಶಾಮೀಲಾಗಿದ್ದ ಆರೋಪದಲ್ಲಿ ಗಡ್ಲಿಂಗ್,ರಾವ್ ಮತ್ತು ಇತರ ಎಂಟು ಜನರನ್ನು ಕಳೆದ ವರ್ಷದ ಜೂನ್ ಮತ್ತು ಆಗಸ್ಟ್‌ನಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯೆಡಿ ಬಂಧಿಸಲಾಗಿತ್ತು. ಈ ಸಮ್ಮೇಳನದಲ್ಲಿಯ ಪ್ರಚೋದನಕಾರಿ ಭಾಷಣಗಳು 2018,ಜ.1 ಮತ್ತು 2ರಂದು ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಯೋಜಿತ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಗಡಶಿರೋಳಿ ಜಿಲ್ಲೆಯ ಸೂರಜಗಡ್‌ದಲ್ಲಿ ಮಾವೋವಾದಿಗಳಿಂದ ದಾಳಿಯ 2016ರ ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಅಲ್ಲಿಯ ಪೊಲೀಸರು ಇವರಿಬ್ಬರ ಕಸ್ಟಡಿಯನ್ನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News