“ಅವರು ಇನ್ನೊಮ್ಮೆ ಶಾಲೆಗೆ ಹೋಗಬೇಕು”

Update: 2019-01-31 16:51 GMT

ವಾಶಿಂಗ್ಟನ್, ಜ. 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸಿರಿಯ, ಇರಾನ್, ಅಫ್ಘಾನಿಸ್ತಾನ ಮತ್ತು ಉತ್ತರ ಕೊರಿಯ ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ತನ್ನದೇ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಟೀಕಿಸಿದ್ದಾರೆ. ಗುಪ್ತಚರ ಇಲಾಖೆಯ ಅಧಿಕಾರಿಗಳು ಇರಾನ್ ಬಗ್ಗೆ ‘ಅಮಾಯಕ’ರಾಗಿದ್ದಾರೆ ಹಾಗೂ ‘ನಿಷ್ಕ್ರಿಯ’ರಾಗಿದ್ದಾರೆ ಎಂದು ಹೇಳಿರುವ ಟ್ರಂಪ್, ಅವರು ಇನ್ನೊಮ್ಮೆ ಶಾಲೆಗೆ ಹೋಗಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಟ್ರಂಪ್‌ರ ಪ್ರಮುಖ ವಿದೇಶ ನೀತಿಗಳನ್ನು ಇತ್ತೀಚಿನ ದಿನಗಳಲ್ಲಿ ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲಿರುವ ಸೆನೆಟ್‌ನ ನಾಯಕ ಮಿಚ್ ಮೆಕಾನೆಲ್ ಮತ್ತು ಅಮೆರಿಕದ ಗುಪ್ತಚರ ಇಲಾಖೆಗಳ ಮುಖ್ಯಸ್ಥರೇ ಸಾರ್ವಜನಿಕವಾಗಿ ಟೀಕಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಇರಾನ್ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ, ಉತ್ತರ ಕೊರಿಯ ತನ್ನ ಪರಮಾಣು ಅಸ್ತ್ರ ಕಾರ್ಯಕ್ರಮವನ್ನು ತ್ಯಜಿಸಲು ಸಿದ್ಧವಿದೆ, ಐಸಿಸ್ ಭಯೋತ್ಪಾದಕ ಗುಂಪನ್ನು ನಾಶಪಡಿಸಲಾಗಿದೆ ಹಾಗೂ ಸಿರಿಯ ಮತ್ತು ಅಫ್ಘಾನಿಸ್ತಾನಗಳಲ್ಲಿ ನಿಯೋಜಿಸಲಾಗಿರುವ ಅಮೆರಿಕ ಸೈನಿಕರನ್ನು ವಾಪಸ್ ತರಲು ಸಮಯ ಪಕ್ವವಾಗಿದೆ ಎಂಬ ಅಧ್ಯಕ್ಷರ ನಿಲುವುಗಳನ್ನು ಅವರು ಪ್ರಶ್ನಿಸಿದ್ದಾರೆ.

‘‘ಇರಾನ್‌ಗೆ ಸಂಬಂಧಿಸಿದ ವಿಷಯಗಳಲ್ಲಿ, ಗುಪ್ತಚರ ಮಂದಿ ತೀರಾ ನಿಷ್ಕ್ರಿಯರಾಗಿರುವಂತೆ ಹಾಗೂ ಅಮಾಯಕರಾಗಿರುವಂತೆ ಕಂಡುಬರುತ್ತಿದೆ’’ ಎಂದು ಬುಧವಾರ ಸರಣಿ ಟ್ವೀಟ್‌ಗಳಲ್ಲಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News