×
Ad

ಫಿಲಿಪ್ಪೀನ್ಸ್ ಬ್ಯಾಂಕ್ ವಿರುದ್ಧ ಬಾಂಗ್ಲಾ ಮೊಕದ್ದಮೆ

Update: 2019-01-31 22:33 IST

ಢಾಕಾ, ಜ. 31: ಅತ್ಯಂತ ದೊಡ್ಡ ಸೈಬರ್ ದರೋಡೆಯಲ್ಲಿ ಶಾಮೀಲಾಗಿರುವುದಕ್ಕಾಗಿ ಫಿಲಿಪ್ಪೀನ್ಸ್‌ನ ಬ್ಯಾಂಕೊಂದರ ವಿರುದ್ಧ ಬಾಂಗ್ಲಾದೇಶವು ನ್ಯೂಯಾರ್ಕ್‌ನಲ್ಲಿ ಮೊಕದ್ದಮೆ ಹೂಡಲಿದೆ ಎಂದು ಬಾಂಗ್ಲಾದೇಶದ ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ಹೇಳಿದ್ದಾರೆ.

ಅಜ್ಞಾತ ಕನ್ನಗಾರರು 2016 ಫೆಬ್ರವರಿಯಲ್ಲಿ ನ್ಯೂಯಾರ್ಕ್‌ನ ಅಮೆರಿಕ ಫೆಡರಲ್ ರಿಸರ್ವ್‌ನಲ್ಲಿರುವ ಬಾಂಗ್ಲಾದೇಶದ ಕೇಂದ್ರೀಯ ಬ್ಯಾಂಕ್‌ನ ಖಾತೆಯಿಂದ 81 ಮಿಲಿಯ ಡಾಲರ್ (ಸುಮಾರು 576 ಕೋಟಿ ರೂಪಾಯಿ) ಹಣ ಕದ್ದಿದ್ದರು. ಆಗ ಹಣವನ್ನು ರಿಝಾಲ್ ಕಮರ್ಶಿಯಲ್ ಬ್ಯಾಂಕಿಂಗ್ ಕಾರ್ಪ್ (ಆರ್‌ಸಿಬಿಸಿ)ನ ಮನಿಲಾ ಶಾಖೆಗೆ ವರ್ಗಾಯಿಸಲಾಗಿತ್ತು. ಆ ಹಣವನ್ನು ಕ್ಷಿಪ್ರವಾಗಿ ತೆಗೆದು ಸ್ಥಳೀಯ ಜುಗಾರಿ ಅಡ್ಡೆಗಳ ಮೂಲಕ ಬಿಳಿ ಮಾಡಲಾಗಿತ್ತು.

ದರೋಡೆಗೈಯಲ್ಪಟ್ಟ ಹಣವನ್ನು ವಾಪಸ್ ಪಡೆದುಕೊಳ್ಳಲು ಆರ್‌ಸಿಬಿಸಿ ಮತ್ತು ದರೋಡೆಯಲ್ಲಿ ಶಾಮೀಲಾದ ‘ಇತರ ಎಲ್ಲರ’ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಾಂಗ್ಲಾದೇಶ್ ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ಫಝ್ಲಿ ಕಬೀರ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News