ಭಾರತೀಯ ರಾಯಭಾರಿಯನ್ನು ಕರೆಸಿಕೊಂಡ ಪಾಕ್ ವಿದೇಶ ಕಾರ್ಯದರ್ಶಿ

Update: 2019-01-31 17:06 GMT

ಇಸ್ಲಾಮಾಬಾದ್, ಜ. 31: ಭಾರತವು ಪಾಕಿಸ್ತಾನಿ ರಾಯಭಾರಿಯನ್ನು ಕರೆಸಿಕೊಂಡ ಒಂದು ದಿನದ ಬಳಿಕ, ಪಾಕಿಸ್ತಾನದ ವಿದೇಶ ಕಚೇರಿಯು ಗುರುವಾರ ಭಾರತದ ರಾಯಭಾರಿಯನ್ನು ಕರೆಸಿಕೊಂಡಿದೆ.

ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿಯು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಿರ್‌ವಾಯಿಝ್ ಉಮರ್ ಫಾರೂಕ್‌ಗೆ ಫೋನ್ ಕರೆ ಮಾಡಿರುವುದಕ್ಕೆ ಪ್ರತಿಭಟನೆ ಸಲ್ಲಿಸಲು ಭಾರತದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಬುಧವಾರ ರಾತ್ರಿ ಪಾಕಿಸ್ತಾನದ ಹೈಕಮಿಶನರ್ ಸುಹೈಲ್ ಮಹ್ಮೂದ್‌ರನ್ನು ಕಚೇರಿಗೆ ಕರೆಸಿಕೊಂಡಿದ್ದರು.

ಪಾಕ್ ಸಚಿವರು ಫಾರೂಕ್‌ಗೆ ಕರೆ ಮಾಡಿರುವುದು ‘‘ಭಾರತದ ಏಕತೆಯನ್ನು ಧ್ವಂಸಗೊಳಿಸಲು ಮಾಡಿದ ಹೀನ ಪ್ರಯತ್ನ’’ ಎಂಬುದಾಗಿ ಭಾರತ ಬಣ್ಣಿಸಿದೆ.

ಗುರುವಾರ, ಭಾರತದ ವಿದೇಶ ಕಾರ್ಯದರ್ಶಿಯು ಪಾಕ್ ರಾಯಭಾರಿಯನ್ನು ಕರೆಸಿಕೊಂಡಿರುವುದನ್ನು ಪ್ರತಿಭಟಿಸಲು, ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ತೆಹ್ಮೀನಾ ಜಂಜುವ ಅವರು ಭಾರತೀಯ ಹೈಕಮಿಶನರ್ ಅಜಯ್ ಬಿಸಾರಿಯರನ್ನು ಕರೆಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News