ನೂತನ ಇ-ಕಾಮರ್ಸ್ ನಿಯಮ: ಹಲವು ಉತ್ಪನ್ನಗಳ ಹಿಂದೆಗೆತ; ಅಮೆಝಾನ್

Update: 2019-02-01 14:35 GMT

ಹೊಸದಿಲ್ಲಿ/ಮುಂಬೈ, ಫೆ. 1: ಬುಧವಾರದಿಂದ ಜಾರಿಗೆ ಬಂದ ಇ ಕಾಮರ್ಸ್ ನಿಯಮಗಳಿಂದ ಅಮೆಝಾನ್.ಕಾಮ್ ತೀವ್ರ ತೊದರೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್ ತನ್ನ ಭಾರತದ ವೆಬ್‌ಸೈಟ್‌ನಲ್ಲಿ ಇರುವ ಎಕ್ಕೊ ಸ್ಪೀಕರ್, ಬ್ಯಾಟರಿ, ಫ್ಲೋರ್ ಕ್ಲೀನರ್ ಸಹಿತ ಹಲವು ವಸ್ತುಗಳನ್ನು ಹಿಂದೆ ತೆಗೆದುಕೊಂಡಿದೆ.

ಶುಕ್ರವಾರ ಮಧ್ಯರಾತ್ರಿ ಗಡುವಿಗಿಂತ ಮೊದಲು ಪರಿಷ್ಕೃತ ನಿಯಮಗಳ ಅನುಸರಣೆ ಆರಂಭಿಸಿರುವುದರಿಂದ ಅಮೆಝಾನ್ ಇಂಡಿಯಾ ಸೈಟ್‌ನಿಂದ ಗುರುವಾರ ತಡ ರಾತ್ರಿ ಕೆಲವು ಉತ್ಪನ್ನಗಳು ನಾಪತ್ತೆಯಾಗಿವೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಕೆಲವರು ಹೇಳಿದ್ದಾರೆ. ಕಂಪೆನಿಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಅನುಸರಣೆಯ ಅಗತ್ಯತೆಯನ್ನು ಅದು ಈಡೇರಿಸುತ್ತಿದೆ. ಗ್ರಾಹಕರು ಸುರಕ್ಷಿತರಾಗಲಿದ್ದಾರೆ ಎಂದು ಒಂದು ಮೂಲ ತಿಳಿಸಿದೆ. ಬೆಳೆಯುತ್ತಿರುವ ಇ ಕಾಮರ್ಸ್ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ಭಾರತ ಡಿಸೆಂಬರ್‌ನಲ್ಲಿ ಪರಿವರ್ತಿಸಿತ್ತು. ಇದರಿಂದ ಕಾಮರ್ಸ್ ಸೆಕ್ಟರ್‌ನಲ್ಲಿ ಅಮೆಝಾನ್ ಮಾತ್ರವಲ್ಲ ವಾಲ್‌ಮಾರ್ಟ್‌ನಂತಹ ಹಲವು ಕಂಪೆನಿಗಳು ಪ್ರವೇಶಿಸಿದ್ದವು. ವಾಲ್‌ಮಾಟ್ ದೇಶೀ ಕಂಪೆನಿ ಫ್ಲಿಪ್ ಕಾರ್ಟ್‌ನೊಂದಿಗೆ ಪಾಲುದಾರಿಕೆ ಪಡೆದುಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News